ಉದ್ಯೋಗಿಗಳಿಗೆ ಇಸ್ತ್ರಿ ಇಲ್ಲದ ಬಟ್ಟೆ ತೊಟ್ಟು ಬನ್ನಿ ಎಂದು ಕಂಪನಿಯೊಂದು ಹೇಳಿದೆ. ವಾರದ ಆರಂಭದಲ್ಲೇ ಇಸ್ತ್ರಿ ಇಲ್ಲದ ಬಟ್ಟೆ ತೊಟ್ಟು ಆಫೀಸ್ಗೆ ಬನ್ನಿ ಎಂದು ಈ ಕಂಪನಿ ಹೇಳಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಆದರೆ ಇದಕ್ಕೊಂದು ಕಾರಣವೂ ಇದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಸೂಕ್ತ ತನಿಖೆ ಮಾಡದ SIT.. ಹೆಚ್ ಡಿಕೆ!
ಈ ಕಂಪನಿಯು ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆಯನ್ನು ತೊಟ್ಟು ಕಚೇರಿಗೆ ಬರುವಂತೆ ಹೇಳಿದೆ. ರಿಂಕಲ್ಸ್ ಅಚ್ಛೇ ಹೈ ಅಂದರೆ ರಿಂಕಲ್ಸ್ ಒಳ್ಳೆಯದು ಎನ್ನುವ ಅಭಿಯಾನ ಆರಂಭಿಸಲಾಗಿದೆ.
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಮತ್ತು ಸಿಎಸ್ಐಆರ್ನ ಮೊದಲ ಮಹಿಳಾ ಮಹಾನಿರ್ದೇಶಕಿ ಡಾ ಎನ್ ಕಲೈಸೆಲ್ವಿ ಈ ನಿರ್ಧಾರ ಪ್ರಕಟಿಸಿದ್ದಾರೆ.
ಪ್ರತಿಯೊಂದು ಬಟ್ಟೆಯನ್ನು ಇಸ್ತ್ರಿ ಮಾಡುವುದರಿಂದ 200 ಗ್ರಾಂ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತದೆ. ಆದ್ದರಿಂದ, ಇಸ್ತ್ರಿ ಮಾಡದ ಬಟ್ಟೆಗಳನ್ನು ಧರಿಸುವುದರಿಂದ, 200 ರಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಮೇ 1-15ರವರೆಗೆ ಸ್ವಚ್ಛತಾ ಪಕವಾಡದ ಅಂಗವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗದಿಎ. ಹವಾಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಇವರು ಹೊಂದಿದ್ದಾರೆ.
ಹಾಗೆಯೇ ಕೆಲಸದ ಸ್ಥಳದಲ್ಲಿ ವಿದ್ಯುತ್ ಶುಲ್ಕವನ್ನು ಶೇಕಡಾ 10 ರಷ್ಟು ಕಡಿತಗೊಳಿಸುವ ಆರಂಭಿಕ ಗುರಿಯನ್ನು ಹೊಂದಿದೆ. ಎಸ್ಒಪಿಯನ್ನು ಜೂನ್-ಆಗಸ್ಟ್ 2024 ರ ಅವಧಿಯಲ್ಲಿ ಪ್ರಾಯೋಗಿಕ ಪ್ರಯೋಗವಾಗಿ ಜಾರಿಗೊಳಿಸಲಾಗುತ್ತದೆ.