ಬೆಳಗಾವಿ : ಐಸಿಸಿ ಚಾಂಪಿಯನ್ ಟ್ರೋಫಿ ಟೀಮ್ ಇಂಡಿಯಾ ಗೆಲ್ಲಲಿ ಎಂದು ಬೆಳಗಾವಿಯ ಚೆನ್ನಮ್ಮ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುಂದಾನಗರಿ ಕ್ರಿಕೆಟ್ ಅಭಿಮಾನಿಗಳಿಂದ ಟೀಮ್ ಇಂಡಿಯಾಗೆ ಶುಭಕೋರಿದ್ದಾರೆ.
ಕ್ರಿಕೆಟ್ ಅಭಿಮಾನಿ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ್ದು, ಇಂಡಿಯಾ ನ್ಯೂಜಿಲೆಂಡ್ ಮಧ್ಯೆ ಫೈನಲ್ ಪಂದ್ಯ ನಡೆಯುತ್ತಿದ್ದು, ಭಾರತ ತಂಡ ಚಾಂಪಿಯನ್ ಟ್ರೋಫಿ ಗೆದ್ದು ಬರಲಿ. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ ಶರ್ಮಾ ತಂಡ ಉತ್ತಮ ಪ್ರದರ್ಶನ ಮಾಡಲಿ ಎಂದು ಟೀಮ್ ಇಂಡಿಯಾ ಆಟಗಾರರ ಪೋಟೋ ಹಿಡಿದು, ಕೈಯಲ್ಲಿ ಭಾರತ ಧ್ವಜ ಹಿಡಿದು, ಗೆದ್ದು ಭಾರತ ಎಂದು ಘೋಷಣೆ ಕೂಗಿದ್ದಾರೆ.
Champion Trophy: ಇಂದು ಭಾರತ vs ನ್ಯೂಜಿಲೆಂಡ್ ಫೈನಲ್ ಕದನ: ಕಿವೀಸ್ ಮಣಿಸಿ ಟ್ರೋಫಿ ಎತ್ತಲಿದೆಯಾ ಟೀಮ್ ಇಂಡಿಯಾ!?
ಇನ್ನೊಂದೆಡೆ ಭಾರತ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಹಿನ್ನಲೆ ಗೆದ್ದು ಬಾ ಇಂಡಿಯಾ ಅಂತ ಶಾಲಾ ಮಕ್ಕಳು ಶುಭ ಹಾರೈಸುತ್ತಿವೆ. ನಗರದ ವಿವೇಕಾನಂದ ಶಾಲೆಯ ಮಕ್ಕಳು ಆಲ್ ದಿ ಬೆಸ್ಟ್ ಟೀಂ ಇಂಡಿಯಾ ಅಂತ ಹಾರೈಸುತ್ತಿದ್ದಾರೆ.