ಬೆಂಗಳೂರು: ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. 1988ರ ಬಳಿಕ ಟೀಂ ಇಂಡಿಯಾ ವಿರುದ್ಧ ಭಾರತದ ನೆಲದಲ್ಲಿ ಟೆಸ್ಟ್ ಗೆದ್ದು ಕಿವೀಸ್ ಪಡೆ ನಿಟ್ಚುಸಿರು ಬಿಟ್ಟಿದೆ. ಬರೋಬ್ಬರಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಟೆಸ್ಟ್ ಪಂದ್ಯ ಗೆದ್ದು ಬೀಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತಿಥೇಯ ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿ ಮಿಂಚಿದ್ದ ರಚಿನ್ ರವೀಂದ್ರ ಅವರೇ ಎರಡನೇ ಇನ್ನಿಂಗ್ಸ್ನಲ್ಲಿ ವಿಲ್ ಯಂಗ್ ಅವರೊಂದಿಗೆ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ..? ಹಾಗಾದ್ರೆ ಈ ಕಾಯಿಲೆಗಳ ಸೂಚನೆ ಇರಬಹುದು.!
ಭಾನುವಾರ ಕೊನೆಯ ದಿನದಾಟದಲ್ಲಿ ಗೆಲುವಿಗೆ 107 ರನ್ ಗಳಿಸಿದ್ದ ಕಿವೀಸ್ಗೆ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ನೀಡಿತ್ತು. ಬೌಲರ್ಗಳಿಗೆ ಪೂರಕವಾಗಿದ್ದ ವಾತಾವರಣದಲ್ಲಿ ಮೊದಲನೇ ಓವರ್ ನಲ್ಲೇ ವಿಕೆಟ್ ಪಡೆಯುವ ಮೂಲಕ ಜಸ್ಪ್ರೀತ್ ಬುಮ್ರಾ ಸಂತಸದ ಅಲೆ ಸೃಷ್ಟಿಸಿದ್ದರು. ಬಳಿಕ ವಿಕೆಟ್ ಬಿಟ್ಟುಕೊಡದ ರಚಿನ್ ಹಾಗೂ ವಿಲ್ ಯಂಗ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಸಂಕ್ಷಿಪ್ತ ಸ್ಲೋರ್:
ಮೊದಲ ಇನ್ನಿಂಗ್ಸ್
ಭಾರತ – 46/10, ನ್ಯೂಜಿಲೆಂಡ್ – 402/10
2ನೇ ಇನ್ನಿಂಗ್ಸ್
ಭಾರತ – 462/10, ನ್ಯೂಜಿಲೆಂಡ್ – 107/2
ಭಾರತದ ಸೋಲಿಗೆ ಪ್ರಮುಖ ಕಾರಣಗಳೇನು?
* ಸತತ ಮಳೆಯಿಂದ ಕೂಡಿದ್ದ ವಾತಾವರಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಾಯಕ ರೋಹಿತ್ ಶರ್ಮಾ ಯಡವಟ್ಟು ಮಾಡಿಕೊಂಡರು. ಮೊದಲನೇ ದಿನ ಮಳೆಯಿಂದಾಗಿ ಒಂದು ಎಸೆತವನ್ನೂ ಆಡಲಾಗಿರಲಿಲ್ಲ. ಹೀಗಾಗಿ ಪಿಚ್ ಬ್ಯಾಟಿಂಗ್ಗೆ ಪೂರಕವಾಗಿ ಇರಲಿಲ್ಲ. ಅಲ್ಲದೇ ವಿಲ್ ಒ ರೂರ್ಕಿ ಬೌಲಿಂಗ್ ಟೀಂ ಇಂಡಿಯಾ ಆಟಗಾರರಿಗೆ ಹೊಸದಾಗಿತ್ತು. ಪಿಚ್ ತೇವಾಂಶದಲ್ಲಿದ್ದ ಕಾರಣ ಚೆಂಡನ್ನು ಗುರುತಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಭಾರತ 2ನೇ ದಿನದಾಟದಲ್ಲಿ 46 ರನ್ಗಳಿಗೆ ಆಲೌಟ್ ಆಯಿತು.
* ಭಾರತದ ಪ್ರಥಮ ಇನ್ನಿಂಗ್ಸ್ ನಲ್ಲಿ ವೇಗಿಗಳಾದ ಮ್ಯಾಟ್ ಹೆನ್ರಿ, ವಿಲ್ ಒ ರೂರ್ಕಿ ಮಾರಕ ಬೌಲಿಂಗ್ ನಿಂದಾಗಿ 46 ರನ್ ಗಳಿಗೆ ಆಲೌಟ್ ಆಯಿತು. ಇದೇ ಇಡೀ ಪಂದ್ಯದ ಫಲಿತಾಂಶಕ್ಕೆ ಕಾರಣವಾಯಿತು.
* ರಚಿನ್ ರವೀಂದ್ರ ಅಮೋಘ ಶತಕವೂ ಭಾರತದ ಸೋಲಿಗೆ ಕಾರಣವಾಯಿತು. ಪಂದ್ಯದಲ್ಲಿ ಎಲ್ಬಿಡಬ್ಲ್ಯೂ ಅಪೀಲ್ ಮಾಡಿದ ಹೊರತಾಗಿಯೂ ರಚಿನ್ ಅಪೈರ್ಸ್ಕಾಲ್ನಿಂದ ಪಾರಾದರು. ಇದು ಟೀಂ ಇಂಡಿಯಾದ ಫಲಿತಾಂಶದ ಮೇಲೆ ಪ್ರಭಾವ ಬೀರಿತು.
* 3ನೇ ದಿನದಾಟದಲ್ಲಿ ರಚಿನ್ – ಸೌಥಿ ಜೊತೆಯಾಟವೂ ಭಾರತದ ಹಿನ್ನೆಡೆಗೆ ಕಾರಣವಾಯಿತು. ಭಾರತ ನ್ಯೂಜಿಲೆಂಡ್ನ 7 ವಿಕೆಟ್ ಗಳನ್ನು 233 ರನ್ ಗಳಿಗೆ ಕಬಳಿಸಿತ್ತು. ಆದರೆ ಅಪರೂಪಕ್ಕೆ ಬ್ಯಾಟ್ ಬೀಸುವ ಸೌಥಿ ಅವರು ರಚಿನ್ ಜೊತೆ ಇನ್ನಿಂಗ್ಸ್ ಬೆಳೆಸಿದ್ದರಿಂದ ನ್ಯೂಜಿಲೆಂಡ್ 400ರ ಗಡಿ ದಾಟುವಂತಾಯಿತು.
* 2ನೇ ಇನ್ನಿಂಗ್ಸ್ನಲ್ಲಿ ಆಡುವ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು. ಸಫ್ರಾಜ್ ಖಾನ್ ಮತ್ತು ರಿಷಬ್ ಪಂತ್ ಬಲ ತಂದುಕೊಟ್ಟಿದ್ದರು. ಆದರೆ ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಸಣ್ಣ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.
* 5ನೇ ದಿನದಲ್ಲಿ ಕಿವೀಸ್ಗೆ ಅಲ್ಪಮೊತ್ತದ ಗುರಿ ನೀಡಿದ್ದರಿಂದ ಭಾರತ ಸುಲಭ ತುತ್ತಾಯಿತು.