ನ್ಯೂಝಿಲೆಂಡ್ ವಿರುದ್ಧ ಹೀನಾಯ ಸೋಲು ಬೆನ್ನಲ್ಲೇ ಕೋಚ್ ಗೌತಮ್ ಗಂಭೀರ್ ಬದಲಾವಣೆ ಪ್ರಶ್ನೆ ಎದ್ದಿದೆ.
ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್: 20 ಮಂದಿ ಸಾವು – ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ
ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ಗೌತಮ್ ಗಂಭೀರ್ಗೆ ಮುಕ್ತ ಅವಕಾಶ ನೀಡಲಾಗಿದೆ. ಇದರ ಜೊತೆ ಗಂಭೀರ್ ಬೇಡಿಕೆಯಿಟ್ಟ ಸಿಬ್ಬಂದಿ ವರ್ಗಗಳನ್ನು ಸಹ ನೀಡಲಾಗಿತ್ತು. ಇದಾಗ್ಯೂ ಭಾರತ ತಂಡವು ಸತತ ವೈಫಲ್ಯ ಅನುಭವಿಸಿದೆ.
ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡದ ಆಯ್ಕೆಯಲ್ಲೂ ಗೌತಮ್ ಗಂಭೀರ್ ಭಾಗವಾಗಿದ್ದಾರೆ. ಅವರ ಸೂಚನೆ ಮೇರೆಗೆ ದೆಹಲಿ ವೇಗಿ ಹರ್ಷಿತ್ ರಾಣಾ ಮತ್ತು ಆಂಧ್ರ ಪ್ರದೇಶದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ಸೇರಿಸಲಾಗಿದೆ.
ಅಂದರೆ ಇಲ್ಲಿ ಬಿಸಿಸಿಐ ಗೌತಮ್ ಗಂಭೀರ್ ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. ಆದರೆ ಕಳೆದ ಎರಡು ಸರಣಿಗಳಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಹೀಗಾಗಿಯೇ ಗೌತಮ್ ಗಂಭೀರ್ ಅವರ ಗರಡಿಯಲ್ಲಿ ಟೀಮ್ ಇಂಡಿಯಾ ಮುಂದಿನ ಸರಣಿಗಳನ್ನು ಹೇಗೆ ಆಡಲಿದೆ ಎಂಬುದನ್ನು ಪರಿಶೀಲಿಸಲು ಬಿಸಿಸಿಐ ಸೂಚಿಸಿದೆ. ಅದರಂತೆ ಗೌತಮ್ ಗಂಭೀರ್ ಅವರ ಸ್ಟ್ರಾಟಜಿ ಪರಿಶೀಲನೆಗೆ ಒಳಪಡುವುದು ಖಚಿತ.
ಅದರಂತೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಗೌತಮ್ ಗಂಭೀರ್ ಪಾಲಿಗೆ ಅಗ್ನಿ ಪರೀಕ್ಷೆ ಎನ್ನಬಹುದು. ಇದಾಗ್ಯೂ ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸುವ ಸಾಧ್ಯತೆಯಿಲ್ಲ. ಏಕೆಂದರೆ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯಲಿದ್ದು, ಅದರಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಗಂಭೀರ್ ಅವರ ಕೋಚಿಂಗ್ ಭವಿಷ್ಯ ನಿರ್ಧಾರವಾಗಲಿದೆ.