4ನೇ ಮಹತ್ವದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಇತ್ತೀಚೆಗೆ ಮೆಲ್ಬೋರ್ನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಗುತ್ತಿಗೆದಾರ ಆತ್ಮಹತ್ಯೆ ಕೇಸ್ ಗೆ ಸಿಕ್ತು ಬಿಗ್ ಟ್ವಿಸ್ಟ್! ಮೃತನ ವಿರುದ್ಧವೇ ವಂಚನೆ ಆರೋಪ!
4ನೇ ಟೆಸ್ಟ್ ಪಂದ್ಯ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶ ಮಾಡುವ ಟೀಮ್ ಇಂಡಿಯಾ ಕನಸಿಗೆ ಆಸ್ಟ್ರೇಲಿಯಾ ತಂಡ ಪೆಟ್ಟು ನೀಡಿದೆ. ಮೆಲ್ಬೋರ್ನ್ ಟೆಸ್ಟ್ ಸೋಲುತ್ತಿದ್ದಂತೆ ಟೀಮ್ ಇಂಡಿಯಾ ಪಾಯಿಂಟ್ಸ್ ಟೇಬಲ್ನಲ್ಲಿ ಕುಸಿತ ಕಂಡಿದೆ.
ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 184 ರನ್ಗಳಿಂದ ಸೋಲು ಕಂಡಿದೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ಗಳು ರನ್ ಕಲೆ ಹಾಕಲು ಪರದಾಡಿದ್ರು. ಬಹಳ ರಕ್ಷಣಾತ್ಮಕ ಆಟ ಆಡುತ್ತಿದ್ದ ರೋಹಿತ್ ತಾಳ್ಮೆ ಕಳೆದುಕೊಂಡು ವಿಕೆಟ್ ಒಪ್ಪಿಸಿದ್ರು. ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಕೂಡ ಭಾರತ ತಂಡಕ್ಕೆ ಕೈ ಕೊಟ್ಟರು. ಇದರ ಪರಿಣಾಮ ಡ್ರಾ ಸಾಧಿಸಬೇಕಿದ್ದ ಪಂದ್ಯವನ್ನೇ ಕೈ ಚೆಲ್ಲಿದೆ.
ಸರಣಿ ಆರಂಭಕ್ಕೂ ಮುನ್ನ ಭಾರತ 2ನೇ ಸ್ಥಾನದಲ್ಲಿತ್ತು. 2ನೇ ಸೋಲು ಕಾಣುತ್ತಿದ್ದಂತೆ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.