ತುಮಕೂರು: ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆ ನರಸಿಪುರ ತಾಲೂಕು, ಕಳ್ಳಿ ಮೂಲದ ನವೀನ್(28), ತಿಪಟೂರು ತಾಲೂಕಿನ ಗಂಗನಘಟ್ಟ ಗ್ರಾಮದ ಶೇಷಾದ್ರಿ(47) ಮೃತ ದುರ್ದೈವಿಗಳಾಗಿದ್ದು,
Garlic Side Effects: ಬೆಳ್ಳುಳ್ಳಿ ಹೆಚ್ಚಾಗಿ ತಿನ್ನಬಾರದು ಏಕೆ? ತಿಂದ್ರೆ ಏನಾಗುತ್ತೆ ಗೊತ್ತಾ?
ನವೀನ್ ಚನ್ನರಾಯಪಟ್ಟಣ ಕಡೆಯಿಂದ ತಿಪಟೂರು ಮಾರ್ಗವಾಗಿ ತೆರಳುತ್ತಿದ್ದರು. ಶೇಷಾದ್ರಿ ಹಾಗೂ ಸಚಿನ್ ಎಂಬುವರು ಬೈಕ್ನಲ್ಲಿ ಹಿಂದಿನಿಂದ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ ಎರಡು ಬೈಕ್ಗಳ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇನ್ನೂ ಘಟನೆ ಸಂಬಂಧ ನೊಣವಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.