ಮಡಿಕೇರಿ :- ಕಾಲೇಜಿಗೆ ತೆರಳಿದ ಬಾಲಕ ಕಣ್ಮರೆ ಆಗಿದ್ದು, ಫೋಟೋ ಹಿಡಿದು ಬೀದಿ ಬೀದಿಯಲ್ಲಿ ತಾಯಿ ಅಲೆದಾಟ ನಡೆಸಿದ ಘಟನೆ ಜರುಗಿದೆ.
ನಮ್ಮ ಹೋರಾಟ ನಿಲ್ಲಿಸಲು ಪ್ರಭಾವಿಗಳಿಂದ ಬೆದರಿಕೆ ಹಾಕಲಾಗ್ತಿದೆ: ಮೃತ್ಯುಂಜಯ ಶ್ರೀ
ಮಗನನ್ನು ಕೊಡಗಿನ ಗೋಣಿಕೋಪ್ಪದಿಂದ ದೂರದ ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಋು ತಾಯಿ. ಆತನ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಲು ಹತ್ತಾರು ಕನಸುಗಳನ್ನು ಕಂಡಿದ್ದಳು. ತನ್ನ ಒಬ್ಬನೇ ಮಗನನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದ ತಾಯಿ ಪ್ರತಿನಿತ್ಯ ಮಗನೊಂದಿಗೆ ಮಾತನಾಡುತ್ತಾ ತನ್ನ ಜೀವನವನ್ನು ಕಳೆಯುತ್ತಿದ್ದಳು.
ಕಳೆದ ದೀಪಾವಳಿ ರಜೆಯಂದು ಕಾಲೇಜಿನಿಂದ ಆಗಮಿಸಿದ್ದ. ಮಗ ತಾಯಿಯೊಂದಿಗೆ ದೀಪಾವಳಿ ಹಬ್ಬ ಖುಷಿ ಖುಷಿಯಿಂದಲೇ ಆಚರಿಸಿ ಸಂಭ್ರಮಿಸಿದ್ದ. ದೀಪಾವಳಿ ರಜೆ ಮುಗಿಯುತ್ತಿದ್ದಂತೆಯೇ ಎಂದಿನಂತೆ ಕಾಲೇಜಿನ ಹಾಸ್ಟೆಲ್ಗೆ ತೆರಳಲು ಮಗ ಅಣಿಯಾಗಿದ್ದ ಹೆತ್ತ ತಾಯಿ ತನ್ನ ಮಗನಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಬ್ಯಾಗಿಗೆ ತುಂಬಿ ಮಗನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿ ಬಸ್ ಹತ್ತಿಸಿದ್ದಳು ಅಷ್ಟೇ.. ಮಗ ಬಸ್ಸಿನಲ್ಲಿ ಹೋದವನು 2-3 ದಿನ ಕಳೆದ್ರು ಹಾಸ್ಟೆಲ್ಗೂ ತಲುಪದೇ ಎಲ್ಲಿ ಹೋಗಿದನ್ನೋ ಗೋತ್ತಿಲ್ಲದೇ ಬಾಲಕ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ಹೀಗಾಗಿ ದೀಕ್ಷಿತ್ ತಾಯಿ ಗೋಣಿಕೋಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಮಗನ ಕಣ್ಮರೆಯಿಂದ ತಾಯಿ ಕುಗ್ಗಿ ಹೋಗಿದ್ದಾಳೆ.