ಬೆಂಗಳೂರು : ರಾಜ್ಯದ ಜನರೇ ಎಚ್ಚರ… ಎಚ್ಚರ…!!..ಈ ಬಾರೀ ಉಷ್ಣಾಂಶದ ಪ್ರಮಾಣ ಭಾರಿ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾತನಾಡಿದ್ದು, ಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಭಾರೀ ಇಳಿಕೆಯಾಗುವ ಸಾಧ್ಯತೆ ಇದ್ದು, ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶ ಇಳಿಕೆ ಆಗಲಿದೆ ಎಂದು ವರದಿಯಾಗಿದೆ. ಸಾಮಾನ್ಯ ಮಟ್ಟಕ್ಕಿಂತ ಉಷ್ಣಾಂಶ ಭಾರೀ ಇಳಿಕೆ ಆಗಲಿದ್ದು, ಹವಾಮಾನ ಇಲಾಖೆಯ ಭಾಷೆಯಲ್ಲಿ ಲಾ-ನಿನೋ ಎಂದು ಕರೆಯಲಾಗುವುದು. ಲಾ-ನಿನೋ ಪರಿಸ್ಥಿತಿಯಿಂದಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರ್ವರೆಗೂ ಅಧಿಕ ಚಳಿ ಇರಲಿದೆ.
ಉತ್ತರಭಾರತದಿಂದ ರಾಜ್ಯಕ್ಕೆ ತಂಪು ಹವೆ ಬೀಸಲಿದ್ದು, ಇದರಿಂದ ಉಷ್ಣಾಂಶವು ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದ್ದು, ಡಿಸೆಂಬರ್ ಹಾಗೂ ಜನವರಿಯಲ್ಲಿ ತಾಪಮಾನ 8ರಿಂದ 10ಡಿಗ್ರಿ ಇಳಿಯುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 12ರಿಂದ 14ಡಿಗ್ರಿ ಸೆಲ್ಸಿಯಸ್ ಇಳಿಯುವ ಸಾಧ್ಯತೆ ಇದೆ. ಬೆಳಗ್ಗೆ 4 ಗಂಟೆಯಿಂದ 8ಗಂಟೆಯವರೆಗೂ ಶೀತದ ವಾತಾವರಣವಿರಲಿದ್ದು, ಇದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.