ಬೆಂಗಳೂರು:- ಕರ್ನಾಟಕದಲ್ಲಿ ಕೊಬ್ಬರಿ ಎಣ್ಣೆ ದರ ದಿಢೀರ್ ಏರಿಕೆ ಆಗಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ.
ನೀವೂ ಬೀಟ್ರೂಟ್ ತಿನ್ನುತ್ತಿರಾ? ಹುಷಾರ್, ಈ ಅಂಗಕ್ಕೆ ಹಾನಿಯಾಗೊದಂತೂ ಪಕ್ಕಾ…!
ಕೊಬ್ಬರಿ ಎಣ್ಣೆ ದರ ಲೀಟರ್ಗೆ 300 ರೂ. ಗಡಿ ದಾಟಿದೆ. ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. 15 ಕೆಜಿ ಟಿನ್ ಕೊಬ್ಬರಿ ಎಣ್ಣೆ ದರ 4,600 ರೂಪಾಯಿ ಆಗಿದೆ.
ಸಾಧಾರಣವಾಗಿ ಮಾರ್ಚ್ ಮಧ್ಯಭಾಗದಿಂದ ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಆದರೆ ಈ ಬಾರಿ ಫೆಬ್ರವರಿ ಕೊನೆಯಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು ಎಳೆನೀರಿಗೆ ಹೆಚ್ಚು ಬಳಕೆಯಾಗುತ್ತಿವೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ. ಇನ್ನು ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆ ಕೂಡ 10-20 ರೂ. ರೂ. ಹೆಚ್ಚಾಗಿದೆ.