ಟಿ. ದಾಸರಹಳ್ಳಿ: ಸಹಕಾರತತ್ವದತ್ತ ಹೆಚ್ಚು ಕ್ರೆಡಿಟ್ ಕೋ ಅಪರೇಟಿವ್ ಸಂಘಗಳು ಮುಖಮಾಡಿ, ಎಲ್ಲಾ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಗೆ ಹೆಚ್ಚು ಗಮನಹರಿಸಬೇಕೆಂದು ಮಾಜಿ ಸಚಿವ, ಶಾಸಕ ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ದಾಸರಹಳ್ಳಿ ಸಮೀಪದ, ದೊಡ್ಡಬಿದರಕಲ್ಲು ಬಳಿಯ ಕರೀಓಬನಹಳ್ಳಿಯಲ್ಲಿನ ಸುವರ್ಣ ಅಭ್ಯುದಯ ಸೌಹರ್ದ ಕ್ರೇಡಿಟ್.ಕೋ.ಅಪರೇಟಿವ್ ಸೊಸೈಟಿಯ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಧನಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಬಡಾವಣೆ ನಿವಾಸಿಗಳು ಮತ್ತು ಸೊಸೈಟಿಯ ನಿರ್ದೇಶಕ ಹನುಮಂತಯ್ಯ, ಬಡಾವಣೆ ನಿವಾಸಿಗಳಿಗೆ ಕಾವೇರಿ ನೀರು ಒದಗಿಸುವಂತೆ ಮನವಿ ಮಾಡಿದ್ದಾರೆ, ಸರಕಾರಕ್ಕೆ ಮನವಿ ಸಲ್ಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ, ನನ್ನ ಯಶವಂತಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ, ಸಹಕಾರ ಇಲಾಖೆಯ ಎಲ್ಲಾ ತತ್ವಗಳನ್ನು ಅಳವಡಿಸಿಕೊಂಡು, ಬಡಾವಣೆಯ ಅಭ್ಯುದಯಕ್ಕೆ ಶ್ರಮಿಸಿ ಎಂದು ಕರೆ ನೀಡಿದರು.
ನಿರ್ದೇಶಕ ಹನುಮಂತಯ್ಯ ಮಾತನಾಡಿ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಪಾಲ್ಗೊಂಡಿದ್ದು, ಇಡೀ ಸೊಸೈಟಿ ಆಡಳಿತ ಮಂಡಳಿಗೆ ಸಂತಸ ತಂದಿದೆ, ಈಗಾಗಲೇ ಬಡಾವಣೆಗೆ ಸಿ.ಎಂ.ಸಿ. ನೀರು ಇದ್ದರು, ನೀರಿನ ಬವಣೆಯಿಂದ ಟ್ಯಾಂಕರ್ ಮೂಲಕ ನೀರನ್ನು, ನಾವೇಲ್ಲಾ ಬಡವಾಣೆ ಜನರ ಬಳಸುತ್ತಿದ್ದೇವೆ, ಅದಷ್ಟೂ ಬೇಗ ಕಾವೇರಿ ನೀರು ಪೂರೈಕೆಗೆ ಶಾಸಕರಿಗೆ ಮನವಿ ಸಲ್ಲಿಸಿದ್ದು, ಧನಾತ್ಮಕವಾಗಿ ನೀರಾವರಿ ಯೋಜನೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.
ಈ ವೇಳೆಯಲ್ಲಿ ಸೊಸೈಟಿಯ ಅಧ್ಯಕ್ಷ ಎಸ್.ಕೆ.ಶಿವರಾಮ್, ಉಪಾಧ್ಯಕ್ಷ ಸಿ.ಭರತ್ ಕುಮಾರ್, ನಿಕಟ ಪೂರ್ವ ಬಿ.ಬಿ.ಎಂ.ಪಿ.ಸದಸ್ಯ ಸತೀಶ್, ನಿರ್ದೇಶಕರುಗಳಾದ ಹನುಮಂತಯ್ಯ, ತಮ್ಮಯ್ಯ, ಶ್ಯಾಮ್ ಚಂದ್ರನ್, ಗೋವಿಂದರಾಜು, ರವಿಕುಮಾರ್, ಜಗದೀಶ್, ನಾಗೇಶ್, ಮಹಿಳಾ ನಿರ್ದೇಶಕಿಯರಾದ ಗಿರಿಜಾ, ಸುನೀತ, ಸವಿತ, ಬಡವಾಣಿ ನಿವಾಸಿಗಳು, ಸ್ಥಳೀಯರು ಉಪಸ್ಥಿತಿರಿದ್ದರು.