ಬೆಂಗಳೂರು: ನಟ ದರ್ಶನ್ ಕೊಲೆ ಪ್ರಕರಣ ಇಡೀ ಕರ್ನಾಟಕದಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ದರ್ಶನ್ ಅವರು ಈ ರೀತಿ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಗೆಬಗೆಯ ಚರ್ಚೆ ನಡೆಯುತ್ತಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸಚಿವ ಜಮೀರ್ ಅಹ್ಮದ್ ಸಲಹೆ ನೀಡಿದ್ದಾರೆ. ಹೌದು ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ , ಪವಿತ್ರಾ ಗೌಡ ಸೇರಿ 13 ಜನರ ಬಂಧನವಾಗಿದೆ.
ದರ್ಶನ್ ಹಾಗೂ ಸಚಿವ ಜಮೀರ್ ಇಬ್ಬರೂ ಆಪ್ತರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರವಾಗಿದೆ. ಜಮೀರ್ ಪುತ್ರನ ಸಿನಿಮಾ ಪ್ರಮೋಷನ್ಗೆ ದರ್ಶನ್ ಸಹಾಯ ಮಾಡಿದ್ದರು. ಆದ್ದರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೂಗು ತೂರಿಸಬೇಡ, ಯಾವುದೇ ಪ್ರತಿಕ್ರಿಯೇ ನೀಡಬೇಡ. ಇದು ತುಂಬಾ ಸೂಕ್ಷ್ಮ ವಿಷಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಚಿವ ಜಮೀರ್ʼಗೆ ತಿಳಿಸಿದ್ದಾರೆ.
PM Matru Vandana Yojana: ಕೇಂದ್ರ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗುತ್ತೆ 11,000 ರೂ, ಹಣ..! ಈಗ್ಲೇ ಅಪ್ಲೈ ಮಾಡಿ
ಇನ್ನೂ ದರ್ಶನ್ ಹಾಗೂ ನಿನ್ನ ಸ್ನೇಹ ನನಗೂ ಗೊತ್ತಿದೆ. ಆದರೆ, ಈ ಕೇಸ್ನಿಂದ ದೂರ ಇರು , ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆ ವಹಿಸು. ನಿನ್ನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಜಮೀರ್ಗೆ ಸಿಎಂ ಸಲಹೆ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ಅವರನ್ನು ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲಿ ವಿಜಯನಗರ ಎಸಿಪಿ ಚಂದನ್ ಬಂಧಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ , ಪವಿತ್ರಾ ಗೌಡ ಸೇರಿ 13 ಜನರ ಬಂಧನವಾಗಿದೆ.