ಬೆಂಗಳೂರು:- ಗ್ಯಾರಂಟಿ ಸವಾಲು ನಡುವೆಯೂ ಇಂದು ತಮ್ಮ 16ನೇ ಬಜೆಟ್ ಮಂಡಿಸಿ ಸಿಎಂ ಸಿದ್ದರಾಮಯ್ಯ ದಾಖಲೆ ಬರೆಯಲಿದ್ದಾರೆ.
ನಯನತಾರಗೆ ವಿಲನ್ ಆದ್ರೂ ದುನಿಯಾ ವಿಜಯ್: ಟಾಲಿವುಡ್ ಬೆನ್ನಲ್ಲೇ ಕಾಲಿವುಡ್ ನಲ್ಲಿ ಸಲಗನ ಯುಗಾರಂಭ!
ಪಂಚ ಗ್ಯಾರಂಟಿಯ ಹೊರೆ, ಬದ್ಧತಾ ವೆಚ್ಚದ ಒತ್ತಡ ಹಾಗೂ ಸೀಮಿತ ಆದಾಯ ಸಂಗ್ರಹದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ರಾಜಸ್ವ ಕೊರತೆಯ ಬಜೆಟ್ ಮಂಡನೆ ನಿರೀಕ್ಷಿಸಲಾಗಿದೆ. ಕಳೆದ ಒಂದು ತಿಂಗಳಿಂದ ಸಿಎಂ 2025-26 ಸಾಲಿನ ಬಜೆಟ್ ಮಂಡನೆಗೆ ಪೂರ್ವಸಿದ್ಧತೆ ನಡೆಸಿದ್ದಾರೆ. ಎಲ್ಲಾ ಇಲಾಖೆಗಳ ಜೊತೆ ಸಭೆ,ವಿವಿಧ ಸಂಘ ಸಂಸ್ಥೆಗಳು, ರೈತ ಸಂಘಟನೆಗಳ ಜೊತೆಯೂ ಸಭೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನದ ಬೇಡಿಕೆಯೊಂದಿಗೆ ಇಲಾಖೆಗಳು,ಸಂಘ ಸಂಸ್ಥೆಗಳು,ರೈತರು ಸಿಎಂ ಸಿದ್ದರಾಮಯ್ಯ ಮುಂದೆ ಬೇಡಿಕೆ ಪಟ್ಟಿ ಇಟ್ಟಿವೆ.
ಕಳೆದ ಬಜೆಟ್ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜಸ್ವ ಕೊರತೆಯ ಪ್ರಮಾಣವನ್ನು ತಗ್ಗಿಸುವ ನಿರೀಕ್ಷೆ ಇದೆ.ಆದರೂ ಅಂದಾಜು ಸುಮಾರು 21,900 ಕೋಟಿ ರೂ. ರಾಜಸ್ವ ಕೊರತೆ ಇರುವ ಸಾಧ್ಯತೆ ಇದೆ.ಆ ಮೂಲಕ ವಾಸ್ತವಿಕ ಆಯವ್ಯಯ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಹೊಣೆಗಾರಿಕೆ ಕಾಯ್ದುಕೊಳ್ಳುವ ಭರದಲ್ಲಿ ಉಳಿತಾಯದ ಬಜೆಟ್ ಮಂಡನೆ ಮಾಡಿದರೆ, ಕೇಂದ್ರದ ಸಹಾಯನುದಾನಕ್ಕೂ ಕೊಕ್ಕೆ ಬೀಳಲಿದೆ.ಹೀಗಾಗಿ ದುಪ್ಪಟ್ಟು ರಾಜಸ್ವ ವೆಚ್ಚದ ಹಾಗೂ ಸೀಮೀತ ಆದಾಯ ಸಂಗ್ರಹದ ಹಿನ್ನೆಲೆ ರಾಜಸ್ವ ಕೊರತೆಯ ಬಜೆಟ್ ಮಂಡಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
2025-26 ಸಾಲಿನಲ್ಲಿ ರಾಜ್ಯದ ರಾಜಸ್ವ ವೆಚ್ಚ ಮತ್ತಷ್ಟು ಜಿಗಿತ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಕಳೆದ 2024-25 ಸಾಲಿನ ಬಜೆಟ್ ನಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ ರೂ. ಅಂದಾಜಿಸಲಾಗಿತ್ತು. ಆದರೆ, ಈ ಬಾರಿ ವೇತನ ಪರಿಷ್ಕರಣೆ, ಬಡ್ಡಿ ಪಾವತಿ ಹೆಚ್ಚಳ, ಪಿಂಚಣಿ ಹೊರೆ, ಆಡಳಿತಾತ್ಮಕ ವೆಚ್ಚ ಹೆಚ್ಚಾಗುವ ಹಿನ್ನೆಲೆ ರಾಜಸ್ವ ವೆಚ್ಚ 3.20 ಲಕ್ಷ ಕೋಟಿ ರೂ. ದಾಟುವ ಅಂದಾಜು ಮಾಡಲಾಗಿದೆ.
ರಾಜಾ್ವ ವೆಚ್ಚದಲ್ಲಿ ಪಂಚ ಗ್ಯಾರಂಟಿಯ ಹೊರೆಯೂ ಸೇರಿದೆ. ಬಡ್ಡಿ ಪಾವತಿ 2025-26 ಸಾಲಿನಲ್ಲಿ ಅಂದಾಜು 45,000 ಕೋಟಿ ರೂ. ಏರಿಕೆಯಾಗುವ ಸಾಧ್ಯಾತೆ ಇದೆ. ಸಹಾಯಧನ/ಆರ್ಥಿಕ ನೆರವು ಅಂದಾಜು 27,000 ಕೋಟಿ ರೂ. ದಾಟುವ ಸಾಧ್ಯತೆ ಇದೆ ಎಂದು ಮಧ್ಯಮಾವಧಿ ಮುನ್ನಂದಾಜಿನಲ್ಲಿ ತಿಳಿಸಲಾಗಿದೆ.