ಬೆಂಗಳೂರು:- ಬೈಎಲೆಕ್ಷನ್ ರಿಸಲ್ಟ್ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯ ಬಗ್ಗೆಯೂ ಚರ್ಚೆ ಮುನ್ನೆಲೆಗೆ ಬಂದಿದೆ.
Health Care: ನಿತ್ಯ ಪುದೀನಾ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? ಇದು ನೀವು ತಿಳಿಯಲೇಬೇಕು!
ಕರ್ನಾಟಕದಲ್ಲಿ ಉಪಚುನಾವನೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಸಂಪುಟ ಪುನಾರಚನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಅವರು ಪರೋಕ್ಷವಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಸುಳಿವೊಂದನ್ನು ನೀಡಿದ ಬಳಿಕ ಈ ಚರ್ಚೆ ಜೋರಾಗಿದೆ. ಇತ್ತೀಚೆಗೆ ಸುದ್ದಿಗಾರರ ಜೊತೆ ಮಾತನಾಡಿದ್ದ ಡಿಕೆಶಿ, ‘ಅಂಥಾ ಸೋನಿಯಾ ಗಾಂಧಿಯೇ ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ್ದಾರೆ. ನಾವು ಕೆಲ ಮಂತ್ರಿಗಳಿಗೂ 2 ವರ್ಷದೊಳಗೆ ಅಧಿಕಾರ ತ್ಯಾಗ ಮಾಡಬೇಕು ಎಂದು ಸಂದೇಶ ಕೊಟ್ಟಿದ್ದೇವೆ’ ಅಂತಾ ಹೇಳಿಕೆ ನೀಡಿದ್ದರು.
ಸಚಿವ ಸಂಪುಟ ಪುನರಚನೆಯ ವಿಷಯ ಗರಿಗೆದರಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ನವದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದು, ಜಾರ್ಖಂಡ್ನಿಂದ ದೆಹಲಿಗೆ ವಾಪಾಸ್ಸಾಗಲಿದ್ದಾರೆ. ನಾಡಿದ್ದು ಎಐಸಿಸಿ ನಾಯಕರನ್ನ ಭೇಟಿಯಾಗಲಿರುವ ಉಭಯ ನಾಯಕರು ಸಚಿವ ಸಂಪುಟ ಪುನಾರಚನೆಯ ಬಗ್ಗೆ ಸಭೆ ನಡೆಸಲಿದ್ದಾರೆ.
ಒಂದು ವೇಳೆ ಸಚಿವ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರವೇ ಸಚಿವ ಸಂಪುಟ ಪುನರಚನೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.