ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಅಗಲಿದ ಆಪ್ತ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದರು. ಮಾಜಿ ಶಾಸಕ ಎಸ್ ಜಯಣ್ಣ ಹೃದಯಾಘಾತದಿಂದ ನಿಧನರಾಗಿದ್ದರು. ಇಂದು ಜಯಣ್ಣ ನಿವಾಸಕ್ಕೆ ತೆರಳಿ ಜಯಣ್ಣ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ವಿರಿಸಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಮೃತ ಜಯಣ್ಣ ಅವರಿಗೆ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಲಾಯಿತು.
ಇಂದು ಮಾಜಿ ಸಿಎಂ ಎಸ್ಎಂ ಕೃಷ್ಣ ಅಂತ್ಯಕ್ರಿಯೆ; ಚಿತೆಗೆ ಅಗ್ನಿಸ್ಪರ್ಶ ಮಾಡಲಿರುವ ಮೊಮ್ಮಗ ಅಮರ್ಥ್ಯ
ನಾಳೆ ಜಯಣ್ಣ ಗೃಹಪ್ರವೇಶವಿತ್ತು. ಆದರೆ ಗೃಹಪ್ರವೇಶಕ್ಕು ಮೊದಲೇ ಜಯಣ್ಣ ವಿಧಿವಶರಾಗಿದ್ದಾರೆ. ಕಳೆದ ವಾರ ಸಿದ್ಧರಾಮಯ್ಯ ಕೊಳ್ಳೇಗಾಲಕ್ಕೆ ಬಂದಿದ್ದಾಗ ಜಯಣ್ಣ ನಿವಾಸಕ್ಕೆ ತೆರಳಿ ಶುಭ ಹಾರೈಸಿದ್ದರು. ಜೊತೆಗೆ ಅನುಗ್ರಹ ನಿಲಯದ ನಾಮಫಲಕ ಅನಾವರಣ ಮಾಡಿದ್ದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನಗು ಜಯಣ್ಣನಿಗು ದೀರ್ಘ ಗೆಳೆತನ. ವಿದ್ಯಾರ್ಥಿ ದೆಸೆಯಿಂದಲೇ ಆತ್ಮೀಯ ಸಂಬಂಧ ಇತ್ತು. ನನ್ನ ಯಾವುದೇ ತೀರ್ಮಾನಕ್ಕೂ ಜಯಣ್ಣ ಬದ್ದರಾಗುತ್ತಿದ್ದರು. ರಾಜಕೀಯದಲ್ಲಿ ಅಪರೂಪದ ವ್ಯಕ್ತಿ. ಮಾತು ಕಡಿಮೆ, ಸೌಮ್ಯ ಸ್ವಭಾವ, ನಂಬಿಕಸ್ಥ ಗೆಳೆಯನಾಗಿದ್ದ ಎಂದು ನೆನಪಿಸಿಕೊಂಡರು.