ಬೆಂಗಳೂರು: ಜಮೀರ್ ಅಹಮ್ಮದ್ ಬಾಲಬಿಚ್ಚಲು ಸಿಎಂ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಸಿಸಿಕ್ಯಾಮರಾಗಳು ಹೆಚ್ಚು ಅಳವಡಿಸಬೇಕು. ಜಮೀರ್ ಅಹಮ್ಮದ್ ಬಾಲಬಿಚ್ಚಲು ಸಿಎಂ ಸಿದ್ದರಾಮಯ್ಯ ಕಾರಣ. ಕಲ್ಲು ಎಸೆಯುವವರು, ಬೆಂಕಿ ಹಚ್ಚುವವರನ್ನು ತಯಾರು ಮಾಡುತ್ತಿದ್ದಾರೆ.
ಜಮೀರ್ ಅಹ್ಮದ್ ಕೊಡುವ ಹಣಕ್ಕಾ ಕಾಂಗ್ರೆಸ್ನವರು ಅವರ ಹಿಂದೆ ಹೋಗುತ್ತಾರೆ ಅಷ್ಟೇ. ಜಯನಗರ, ಬಿಟಿಎಂ ಲೇಔಟ್ ಎಲ್ಲೂ ನಡೆಯದ ಘಟನೆ ಚಾಮರಾಜಪೇಟೆಯಲ್ಲಿ ಏಕೆ ನಡೆಯುತ್ತದೆ? ಎಂದು ಪ್ರಶ್ನಿಸಿದರು.
ಫ್ರೀಜ್ ನಲ್ಲಿ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಇಡಬೇಡಿ! ಇವು ವಿಷಕ್ಕೆ ಸಮ
ಮುಸ್ಲಿಮರಲ್ಲಿ ಒಳ್ಳೆಯವರಿದ್ದಾರೆ, ಆದರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ. ಎಫ್ಐಆರ್ ಸರಿಯಾಗಿ ಹಾಕಿಲ್ಲ, ಅಮಾಯಕನನ್ನು ಕರೆತಂದು ಕೂರಿಸಿದ್ದಾರೆ. ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ್ದಾರೆ. ಪ್ರಕರಣ ಮುಚ್ಚಿಹಾಕಲು ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಿಜವಾದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಜಮೀರ್ ಮೂರು ಹಸುಗಳನ್ನು ಕೊಡಿಸುತ್ತೇನೆ ಅಂದಿದ್ದಾರೆ. ಸಚಿವ ಜಮೀರ್ಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವೇ? ಸಾವಿರ ಗೋವು ತಂದು ಕೊಟ್ಟರೂ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ. ಜಮೀರ್ ಮಾಡುತ್ತಿರುವ ಈ ಕೆಲಸವನ್ನು ಮುಸ್ಲಿಮರೇ ಮೆಚ್ಚುವುದಿಲ್ಲ ಎಂದು ವಾಗ್ದಾಳಿ ಮಾಡಿದರು.