ಬೆಂಗಳೂರು:- ದುಷ್ಟ ಶಕ್ತಿ ಯಾರಾದರೂ ರಾಜ್ಯದಲ್ಲಿ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಕೆಟ್ಟವರ ಸಂಹಾರ ಆಗಬೇಕು ನಿಜ. ಆದರೆ ಸರ್ಕಾರ ಚಾಮುಂಡೇಶ್ವರಿ ಚಿತ್ರ ಬಳಕೆ ಮಾಡಿ ಜಾಹೀರಾತು ಕೊಟ್ಟಿದ್ದು ತಪ್ಪು. ದುಷ್ಟ ಶಕ್ತಿಗಳು ರಾಜ್ಯಕ್ಕೆ ಯಾರು ಅಂದರೆ ಅದು ಸಿದ್ದರಾಮಯ್ಯ. ಅವರಿಂದಲೇ ದುಷ್ಟ ಶಕ್ತಿಗಳ ಸಂಹಾರ ಶುರು ಆಗಲಿ ಎಂದರು.
ಹುಬ್ಬಳ್ಳಿಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್ಗಳ ಮೇಲೆ ಸರ್ಕಾರ ಕೇಸ್ ದಾಖಲು ಮಾಡಿತ್ತು. ಈಗ ಒಂದು ಸಮುದಾಯವನ್ನು ಓಲೈಕೆ ಮಾಡಲು ಎಲ್ಲಾ ಕೇಸ್ ವಾಪಸ್ ಪಡೆದಿದ್ದಾರೆ. ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ. ಸಂಘಟಿತ ಅಪರಾಧ ಮಾಡಿರೋ ಕೇಸ್ ವಾಪಸ್ ಪಡೆದಿರೋದು ಕೂಡ ಸರ್ಕಾರದ ಸಂಘಟಿತ ಅಪರಾಧವೇ ಆಗಿದೆ. ಹೀಗಾಗಿ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಲು ಹೋರಾಟ ಮಾಡುತ್ತೇವೆ. ನಾವು ಕೋರ್ಟ್ನಲ್ಲಿ ಆಕ್ಷೇಪಣೆ ಅರ್ಜಿ ಹಾಕುತ್ತೇವೆ ಎಂದು ಹೇಳಿದರು.