ಮೈಸೂರು: ಸಿಎಂ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸಂಸದ ಯದುವೀರ್ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಇಡಿಯಿಂದ ಮುಡಾ ಆಸ್ತಿ ಜಪ್ತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಡಾದಲ್ಲಿ ತಪ್ಪುಗಳು ಆಗಿದೆ ಎಂಬುದು ಇಡಿಯ ವರದಿಯಲ್ಲಿ ಗೊತ್ತಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಆರೋಪ ಬಂದ ದಿನವೇ ನಾವು ಸಿಎಂ ರಾಜೀನಾಮೆ ಕೇಳಿದ್ದೇವು. ಸಿಎಂ ತನಿಖೆಯಾಗಲಿ ಎಂದು ಹೇಳುತ್ತಿದ್ದರು. ಈಗ ಇಡಿಯೇ ತನಿಖೆ ಮಾಡಿ ಅಕ್ರಮ ಆಗಿದೆ ಎಂದು ವರದಿ ಬಿಡುಗಡೆ ಮಾಡಿದೆ. ಈಗಲಾದರೂ ಮುಖ್ಯಮಂತ್ರಿಗಳು ರಾಜೀನಾಮೇ ಕೊಡಬೇಕು. ನಿಷ್ಪಕ್ಷ ತನಿಖೆಗೆ ಸಿಎಂ ಅನುಕೂಲ ಮಾಡಿಕೊಡಲಿ. ಸಂಪೂರ್ಣ ತನಿಖೆ ಮುಗಿದ ಮೇಲೆ ತಪ್ಪಿತ್ಥಸ್ತರಲ್ಲ ಎಂದು ಸಾಬೀತಾದ್ರೆ ಮತ್ತೆ ಅಧಿಕಾರ ಪಡೆದುಕೊಳ್ಳಲಿ. ಸಿಎಂ ರಾಜೀನಾಮೆಗೆ ನಾವು ಮತ್ತೆ ಹೋರಾಟ ಆರಂಭಿಸುತ್ತೇವೆ. ಇದು ಮುಡಾ ಕ್ಲೀನ್ ಆಗುವ ಮೊದಲ ಹೆಜ್ಜೆಯಾಗಿದ್ದು, ಮುಡಾ ಸಂಪೂರ್ಣವಾಗಿ ಕ್ಲೀನ್ ಆಗಲು ಇನ್ನೂ ಎರೆಡು ವರ್ಷ ಬೇಕಿದೆ ಎಂದರು.
ದೇಶ ದ್ರೋಹಿಗಳನ್ನು ಮಟ್ಟ ಹಾಕುವ ಕೆಲ್ಸ ರಾಜ್ಯ ಸರ್ಕಾರ ಮಾಡ್ತಿಲ್ಲ: ಬಿವೈ ವಿಜಯೇಂದ್ರ
ಮಾಜಿ ಸಂಸದರ ನಡವಳಿಕೆಗಳಿಂದ ಕಾರ್ಯಕರ್ತರ ಬೇಸರ
ಇದೇ ವೇಳೆ ಮಾಜಿ ಸಂಸದ ಪ್ರತಾಪ ಸಿಂಹ ಉಚ್ಚಾಟನೆಗೆ ಕಾರ್ಯಕರ್ತರು ಮನವಿ ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಜಿ ಸಂಸದರ ನಡವಳಿಕೆಗಳು ಕಾರ್ಯಕರ್ತರಿಗೆ ಬೇಸರ ತರಿಸಿರಬಹುದು. ಕಳೆದ ಮೂರು ತಿಂಗಳಿನಲ್ಲಿ ಪ್ರತಾಪ ಸಿಂಹ ನೀಡಿರುವ ಹೇಳಿಕೆಗಳು ಮತ್ತು ನಡೆದಿರುವ ಘಟನೆಗಳಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಹೀಗಾಗಿ ಉಚ್ಚಾಟನೆಗೆ ಮನವಿ ಕೊಟ್ಟಿದ್ದಾರೆ. ಪತ್ರದ ಬಗ್ಗೆ ಪಕ್ಷರ ವರಿಷ್ಟರು ತೀರ್ಮಾನ ಮಾಡಲಿದ್ದಾರೆ. ವೈಯಕ್ತಿಕವಾಗಿ ನನಗೆ ಯಾರು ಪಕ್ಷ ಬಿಟ್ಟು ಹೋಗುವುದು ಇಷ್ಟ ಇಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿರುವ ನಾವು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ.ನಮ್ಮ ನಮ್ಮಲೇ ಗೊಂದಲಗಳು ವಿರೋಧ ಅಭಾಸಗಳು ನಡೆಯಬಾರದು. ಎಲ್ಲವನ್ನೂ ತಿದ್ದಿಕೊಂಡು ಒಟ್ಟಾಗಿ ಸಾಗುವ ಕಾಲ ಇದು ಎಂದರು.
ಅರಮನೆಯೇ ಸರ್ಕಾರದ ಟಾರ್ಗೆಟ್
ಬೆಂಗಳೂರು ಅರಮನೆ ವಿಚಾರವಾಗಿ ಮಾತನಾಡಿ, ಅರಮನೆಗೂ ಸರ್ಕಾರ ನಡುವೆ ಬಹಳ ವರ್ಷದಿಂದ ಕಾನೂನಿನ ಸಂಘರ್ಷ ನಡೆಯುತ್ತಿದೆ. ನಾನು ರಾಜಕಾರಣಕ್ಕೆ ಬಂದ ಕಾರಣಕ್ಕೆ ಅದು ಹೆಚ್ಚಾಗಿಲ್ಲ. ಸಿದ್ದರಾಮಯ್ಯ ಮೊದಲ ಬಾರಿ ಉಪಮುಖ್ಯಮಂತ್ರಿಯಾದ ದಿನದಿಂದ ಈ ಹೋರಾಟ ಶುರುವಾಗಿದೆ. ಸರ್ಕಾರಕ್ಕೆ ಅರಮನೆ ಟಾರ್ಗೆಟ್ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ನಾವು ಸದಾ ಕಾಲ ಟಾರ್ಗೆಟ್ ಅಗುತ್ತಲೇ ಬಂದಿದ್ದೇವೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದರು.