ಚಿಕ್ಕಮಗಳೂರು:– ರಾಷ್ಟ್ರಪತಿಗೆ ಅಗೌರದ ಮಾತುಗಳನ್ನಾಡಿದ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆ ಕೇಳುವಂತೆ ಮಾಜಿ ಶಾಸಕ ಸಿಟಿ ರವಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಶೋಷಿತರ ಹೆಸರಿನಲ್ಲಿ ಸಮಾವೇಶ ಮಾಡಿದ್ದಾರೆ. ಅಲ್ಲಿಗೆ ಬಂದವರು ಯಾರು? ಸ್ಪಾನ್ಸರ್ ಮಾಡಿದ್ದು ಯಾರು? ಭೈರತಿ ಸುರೇಶ್ ಕೋಟಿ ಕೋಟಿ ಹಣಕೊಟ್ಟು ಶೋಷಿತರ ಸಮಾವೇಶ ಮಾಡಿದ್ದಾರೆ. ಇವರು ಶೋಷಿತರಾ? ಹೆಸರು ಮಾತ್ರ ಶೋಷಿತ ಸಮಾವೇಶ ಅಷ್ಟೇ. ಸಿದ್ದರಾಮಯ್ಯನವರಿಗೆ ಅಧಿಕಾರ ತಪ್ಪಿ ಹೋಗಬಾರದು ಅಂತ ಶೋಷಿತ ಸಮಾವೇಶ ಮಾಡಿದ್ದಾರೆ ಎಂದರು.
ಶೋಷಿತರ ಸಮಾವೇಶದಲ್ಲಿ ಮಹಾಮಹಿಮ ರಾಷ್ಟ್ರಪತಿ ಅವರಿಗೆ ಕಿಂಚಿತ್ತು ಗೌರವ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಏಕವಚನದಲ್ಲಿ ರಾಷ್ಟ್ರಪತಿ ಬಗ್ಗೆ ಮಾತನಾಡಿದ್ದಾರೆ. ಮಹಿಳೆ ಎನ್ನುವುದನ್ನು ನೋಡದೆ ಅವಳು ಇವಳು ಎಂದು ಮಾತನಾಡಿದ್ದಾರೆ. ನಾಲಿಗೆ ಕುಲ ಹೇಳುತ್ತದೆ ಎಂದು ಹಳ್ಳಿಗಳಲ್ಲಿ ಆಡು ಮಾತಿದೆ. ಆ ಸ್ಥಾನಕ್ಕೆ ಗೌರವ ಕೊಡದ ನಿಮ್ಮ ವ್ಯಕ್ತಿತ್ವ ರಾಜ್ಯಕ್ಕೆ ಕಪ್ಪು ಚುಕ್ಕಿ. ಇದು ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್ನ ಸಂಸ್ಕೃತಿಯನ್ನು ತೋರಿಸುತ್ತದೆ. ರಾಷ್ಟ್ರಪತಿ ಸ್ಥಾನದ ಬಗ್ಗೆ ನಿಮಗೆ ಕಿಂಚಿತ್ತು ಗೌರವ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.