ಕೋಲ್ಕತ್ತಾ: ಮೊದಲು ನ್ಯಾಯ ದೊರಕಿಸಿಕೊಡಿ, ಬಳಿಕ ಇದೆಲ್ಲವನ್ನು ಕೊಡಿ ಎಂದು ಆರ್ಜಿ ಕರ್ ಕಾಲೇಜಿನ ವೈದ್ಯರು ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಚಹಾ ಆಹ್ವಾನ ನಿರಾಕರಿಸಿ ಹೇಳಿದರು. ಕಾಳಿಘಾಟ್ನಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಆರ್ಜಿ ಕರ್ ಕಾಲೇಜಿನ ಟ್ರೈನಿ ವೈದ್ಯೆ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆಯಲ್ಲಿದ್ದ ವೈದ್ಯರು ಪಾಲ್ಗೊಂಡಿದ್ದರು.
ಸಿಎಂ ಮಮತಾ ಬ್ಯಾನರ್ಜಿ ಚಹಾ ಕುಡಿಯಲು ಪ್ರತಿಭಟನಾನಿರತ ವೈದ್ಯರನ್ನು ಆಹ್ವಾನಿಸಿದ್ದರು. ಮೊದಲು ನ್ಯಾಯ ದೊರಕಿಸಿಕೊಡಿ, ಬಳಿಕ ಇದನ್ನೆಲ್ಲಾ ಕೊಡಿ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Onam 2024: ಓಣಂ ಹಬ್ಬಆಚರಿಸುವ ವಿಧಾನ, ಹಿಂದಿನ ಮಹತ್ವ ಮತ್ತು ವಿಶೇಷತೆ ಏನು ಗೊತ್ತಾ..?
ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬರ್ಬರವಾಗಿ ಅತ್ಯಾಚಾರ, ಹತ್ಯೆಗೀಡಾದ 31 ವರ್ಷದ ಸ್ನಾತಕೋತ್ತರ ಟ್ರೈನಿ ವೈದ್ಯೆ ಸಾವಿಗೆ ನ್ಯಾಯ ಬೇಕು. ನ್ಯಾಯ ಸಿಕ್ಕರೆ ಮಾತ್ರ ಚಹಾವನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು. ಕೋಲ್ಕತ್ತಾದಲ್ಲಿ ಮಳೆಯ ನಡುವೆಯೂ ತಮ್ಮ ಮನೆಯ ಹೊರಗೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರೊಂದಿಗೆ ಮಮತಾ ಬ್ಯಾನರ್ಜಿ ಮಾತನಾಡಿದರು.