ಬೆಂಗಳೂರು/ಮೈಸೂರು: ತವರು ಜಿಲ್ಲೆ ಮೈಸೂರನ್ನು ಗೆಲ್ಲಬೇಕು, ಚಾಮರಾಜನಗರ ಮರಳಿ ಪಡೆಯಲು ಸಿಎಂ ಸಿದ್ದರಾಮಯ್ಯ ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಹೌದು. ಈ ಎರಡು ಕ್ಷೇತ್ರಗಳನ್ನು ಗೆಲ್ಲಲು ಸಿದ್ದರಾಮಯ್ಯ ಇಂದಿನಿಂದ 4 ದಿನಗಳ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಕಡೆಗಳಿಗೆಯಲ್ಲಿ ತಂತ್ರ ಮಾಡಿದರೆ ಲಾಭ ಇಲ್ಲ. ಅದಕ್ಕೆ ಈಗಲೇ ಯುದ್ಧ ತಂತ್ರ ರೂಪಿಸಬೇಕು ಬರುತ್ತೇನೆ ಎಂದು ಆಪ್ತರಿಗೆ ಸಂದೇಶ ಕಳುಹಿಸಿದ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಸರಣಿ ಸಭೆ ನಡೆಸಲಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
ಮೈಸೂರು ಮಹಾರಾಜ ಯದುವೀರ್ ವಿರುದ್ಧ ರಣತಂತ್ರ ಹೂಡುವುದರ ಜೊತೆ ಚಾಮರಾಜನಗರ ಭಿನ್ನಾಭಿಪ್ರಾಯ ಸರಿಪಡಿಸುವ ಹೊಣೆಯೂ ಸಿಎಂ ಹೆಗಲಿಗಿದೆ. ಜಾತಿ ಸಮೀಕರಣದಲ್ಲಿ ನಾಯಕರನ್ನು ಕರೆದು ಮಾತನಾಡುವುದು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡುವುದು, ಗೊಂದಲ ಅಸಮಧಾನವಿದ್ದರೆ ಆ ನಾಯಕರನ್ನು ಕರೆದು ಮಾತನಾಡುವುದು. ಹೀಗೆ ಮೈಸೂರು ಲೋಕಸಭೆ ಹಾಗೂ ಚಾಮರಾಜನಗರ ಲೋಕಸಭೆ ಎರಡೂ ಕ್ಷೇತ್ರದ ಚುನಾವಣಾ ರಣತಂತ್ರ ಹೆಣೆಯಲು ಸ್ವತ: ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.