ಹುಬ್ಬಳ್ಳಿ: ನಗರದ ಎಸ್. ಎಸ್. ಶೆಟ್ಟರ್ ಪೌಂಡೇಶನ್ ಅವರ ವೇದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಯ ” ಸ್ಕೂಲ್ ಒಲಂಪಿಕ್” ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷರು ಹಾಗೂ ವೇದಾ ಶಾಲೆಯ ಚೇರ್ಮನ್ ಆದ ಸಂಕಲ್ಪ ಶೆಟ್ಟರ ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಗಳಲ್ಲಿ ಭಾಗವಹಿಸುವುದು ಮುಖ್ಯ ನಿಮ್ಮ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಕ್ರೀಡೆ ಒಂದು ಉತ್ತಮ ವೇದಿಕೆ ಇದು ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯವನ್ನು ನೀಡುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ರವಿಚಂದ್ರನ್ ಬಾಲೆಹೊಸೂರು ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲೇ ಒಳ್ಳೆಯ ಶಿಸ್ತು, ಹಾಗೂ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ನಿರಂತರ ಅಭ್ಯಾಸ ಮತ್ತು ಶ್ರಮ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಪ್ರಾರ್ಥನೆ ಮತ್ತು ವೇದಿಕೆಯ ಮೇಲಿನ ಗಣ್ಯರು ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಿ ವೇದಾ ಶಾಲೆ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಬಾವುಟ ಹಿಡಿದುಕೊಂಡು ಪಥ ಸಂಚಲನ ನಡೆಸಿದರು.ನಂತರ ನಮ್ಮ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಹಿಡಿದು ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಪಿರಾಮಿಡ್ ಪ್ರದರ್ಶನ ನಡೆಸಲಾಯಿತು.
ಪ್ರಶಸ್ತಿ ಪತ್ರ ಪ್ರಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಚೇರಮನ್ನರಾದ ಸಂಕಲ್ಫ ಶೆಟ್ಟರ್ ಟ್ರಸ್ಟಿ ಶ್ರದ್ಧಾ ಶೆಟ್ಟರ್ ಅವರು ಜಯಶಾಲಿಯಾದ ತಂಡಗಳಿಗೆ ಹಾಗೂ ವೈಯಕ್ತಿಕ ಆಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು.
ಹೆಚ್ಚು ಗುಂಪು ಹಾಗೂ ವೈಯಕ್ತಿಕ ಆಟಗಳಲ್ಲಿ ಜಯಗಳಿಸಿ ಜೆ ಎಸ್ ಎಸ್ ಮಂಜುನಾಥೇಶ್ವರ ಶಾಲೆ ಧಾರವಾಡ ಜನರಲ್ ಚಾಂಪಿಯನ್ ಎನಿಸಿಕೊಂಡಿತು.
ಈ ಕ್ರೀಡಾಕೂಟಕ್ಕೆ ಸುಮಾರು 35 ಕ್ಕೂ ಹೆಚ್ಚಿನ ಗ್ರಾಮೀಣ,ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಶಾಲೆಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಒಳಾಂಗಣ ಕ್ರೀಡೆಗಳಾದ ಕೇರಂ, ಟೇಬಲ್ ಟೆನಿಸ್, ಕರಾಟೆ .ಹೊರಾಂಗಣ ಕ್ರೀಡೆಗಳಾದ ಕಬ್ಬಡ್ಡಿ,ವಾಲಿಬಾಲ್ ಹಾಗೂ ವೈಯಕ್ತಿಕ ಆಟಗಳಾದ ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಆಟಗಳಿದ್ದವು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಂಚಲ್ ಶೆಟ್ಟರ್, ಶಾಲೆಯ ಟ್ರಸ್ಟಿ ಶ್ರದ್ಧಾ ಸಂಕಲ್ಪ ಶೆಟ್ಟರ್ ಪ್ರಾಂಶುಪಾಲರಾದ ಬೀನಾ ಝಾನ್, ಆಡಳಿತಾಧಿಕಾರಿಗಳಾದ ವಿಶಾಲ ಬಿನ್ನಾಳ, ಉಪಸ್ಥಿತರಿದ್ದರು .