ನೆಲಮಂಗಲ:- ನಗರಸಭೆ ವ್ಯಾಪ್ತಿಯ ಜಾಸ್ ಟೋಲ್ ಸಮೀಪವಿರುವ ರಾಶಿ ಗೇಟ್ ವೇ ಬಡಾವಣೆಯ ನಿವಾಸಿಗಳಿಂದ ಬಡಾವಣೆಯ ಸುತ್ತಮುತ್ತ ಸ್ವಚ್ಛತಾ ಆಂದೋಲನವನ್ನು ನಗರ ಸಭೆ ಸಹಯೋಗದೊಂದಿಗೆ ಆಚರಿಸಲಾಯಿತು.
ಇನ್ನು ಬಡಾವಣೆಯ ನಿವಾಸಿ ರಾಜಣ್ಣ ( ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ) ಮಾತನಾಡಿ ನಮ್ಮ ಸುತ್ತಮುತ್ತಲೂ ಉಂಟಾಗುವ ಗಲೀಜಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ರಾಷ್ಟ್ರಪಿತ ಮಹಾತ್ಮಗಾಂಧಿಯವರು ತಾವೇ ಸ್ವತಃ ಸ್ವಚ್ಛತಾಕಾರ್ಯಕ್ಕೆ ಇಳಿಯುವ ಮೂಲಕ ಪೊರಕೆ ಹಿಡಿದು ನಿಂತಿದ್ದರು. , ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಕರವಾದ ಜೀವನ ನಡೆಸಬಹುದಾಗಿದೆ. ವಾರದಲ್ಲಿ ಒಂದು ದಿನ ನಮ್ಮ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಶಿ ಗೇಟ್ ವೇ ಬಡಾವಣೆಯ ನಿವಾಸಿಗಳಾದ ಮಣಿಕಂಠ. ರವಿ ಅಂಗಡಿ. ರಮೇಶ್. ಶೈಲಜಾ. ವಸಂತಿ. ಪ್ರಕಾಶ್ ಕಂಠಿ. ಮತ್ತಿತರರು ಉಪಸ್ಥಿತರಿದ್ದರು