ತುಮಕೂರು : ಹೃದಯಾಘಾತದಿಂದಾಗಿ ಹತ್ತನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಭೈರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬೈರಾಪುರ ಗ್ರಾಮದ ಜಯರಾಂ ಪುತ್ರನಾಗಿದ್ದ ರಾಹುಲ್ (16), ಮೃತ ವಿದ್ಯಾರ್ಥಿ
ತುಮಕೂರಿನಲ್ಲಿ ಮೈಕ್ರೋಫೈನಾನ್ಸ್, ಬಡ್ಡಿದಂಧೆಕೋರರ ಕಿರುಕುಳಕ್ಕೆ ಮತ್ತೆರಡು ಬಲಿ
ಚಿಕ್ಕನಾಯಕನಹಳ್ಳಿ ಪಟ್ಟಣದ ಜಿಎಚ್ಎಸ್ ಲ್ಲಿ ಹತ್ತನೇ ತರಗತಿ ಓದುತ್ತಿದ್ದ ರಾಹುಲ್ ನಿನ್ನೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ಆದರೆ ರಾತ್ರಿ 9:30ರ ಸುಮಾರಿಗೆ ರಾಹುಲ್ ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಹುಳಿಯಾರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ರಾಹುಲ್ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆ ಎದುರು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.