ಬೆಂಗಳೂರು:- ರಾಜ್ಯ ಬಿಜೆಪಿಯಲ್ಲಿ ಬಣ ಕಚ್ಚಾಟ ತೀವ್ರಗೊಂಡಿದ್ದು, ವಸ್ತುಸ್ಥಿತಿ ವರದಿ ಪಡೆಯಲು ರಾಜ್ಯಕ್ಕೆ ಬಿಎಲ್ ಸಂತೋಷ್ ಎಂಟ್ರಿ ಕೊಟ್ಟಿದ್ದಾರೆ.
ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಸಮೀಪ ಪರಿಸ್ಥಿತಿ ಕೈ ಮೀರಿದ್ದು, ವಸ್ತುಸ್ಥಿತಿ ಪಡೆಯಲು ಬಿಎಲ್ ಸಂತೋಷ್ ರಾಜ್ಯಕ್ಕೆ ಬಂದಿದ್ದಾರೆ. ಈ ಮಧ್ಯೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸುನಿಲ್ ಕುಮಾರ್ ವಿಮುಕ್ತಿ ಕೇಳೋ ಮೂಲಕ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.
ಮಾಜಿ ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಅವಾಚ್ಯ ಪದಗಳ ನಿಂದನೆ ಆರೋಪ : ವಿಡಿಯೋ ವೈರಲ್
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆ ಪಕ್ಷದೊಳಗಿನ ಬಣಗಳ ಮಧ್ಯೆ ಬಲ ಪ್ರದರ್ಶನಕ್ಕೆ ವೇದಿಕೆ ಆಗುವ ಎಲ್ಲಾ ಲಕ್ಷಣಗಳೂ ಈಗಿಂದಲೇ ಕಾಣಿಸುತ್ತಿದೆ. ಹೌದು, ಬಿಜೆಪಿ ಮನೆ ಬಿರುಕು ಮುಚ್ಚಲಾಗದಷ್ಟು ಹೆಚ್ಚಾಗಿದ್ದು, ಆಂತರಿಕ ಕಚ್ಚಾಟ ಉಲ್ಬಣಗೊಂಡಿದೆ.
ಇನ್ನೂ ಪಕ್ಷದಲ್ಲಿ ಇಷ್ಟೆಲ್ಲಾ ಜಟಾಪಟಿ ನಡೀತಿರುವ ನಡುವೆ ನಾಯಕರಿಗೆ ಶಾಸಕ ಸುನಿಲ್ ಕುಮಾರ್ ಶಾಕ್ ಕೊಟ್ಟಿದ್ದಾರೆ. ತಮ್ಮನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿಮುಕ್ತಿಗೊಳಿಸಲು ಸುನಿಲ್ ಕುಮಾರ್ ವಿಜಯೇಂದ್ರ ಹಾಗೂ ಬಿ ಎಲ್ ಸಂತೋಷ್ ಬಳಿ ಕೇಳಿಕೊಂಡಿದ್ದು, ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಸುನಿಲ್ ಕುಮಾರ್ ರಾಜೀನಾಮೆ ಕೊಡಲು ಮುಂದಾಗಿದ್ದಕ್ಕೆ ವಿಜಯೇಂದ್ರ ಕಾರಣ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ತೀವ್ರಗೊಂಡ ಬೆನ್ನಲ್ಲೇ ಇಂದು ಬಿಜೆಪಿ ಕಚೇರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಭೇಟಿ ಕೊಟ್ಟಿದ್ದರು. ರಾಜ್ಯ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಮುನ್ನ ಸಂತೋಷ್ ವಸ್ತುಸ್ಥಿತಿ ರಿಪೋರ್ಟ್ ಪಡೆದಿದ್ದಾರೆ ಎನ್ನಲಾಗಿದೆ.