ಚಿಕ್ಕಮಗಳೂರು:- ಮಾಜಿ ಶಾಸಕ ಸಿಟಿ ರವಿಗೆ ಪರಿಷತ್ ಟಿಕೆಟ್ ಒಲಿದಿದೆ. ಟಿಕೆಟ್ ಸಿಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಭವ್ಯ ಸ್ವಾಗತ ಮಾಡಿದ್ದು, ರವಿ ಅವರು ಚಿಕ್ಕಮಗಳೂರಿಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಬಳಿಕ ಮಾತನಾಡಿದ ಸಿಟಿ ರವಿ, 95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ. ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನ ಪಕ್ಷ ನಿರ್ಧಾರ ಮಾಡುತ್ತದೆ. ಇದೀಗ ಪರಿಷತ್ ಟಿಕೆಟ್ ನೀಡಿದ್ದಕ್ಕೆ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಳೆ ಮತದಾನ ಮಾಡಿ ಬೆಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಸ್ಷಷ್ಟನೆ ನೀಡಿದರು.