ಬೆಳಗಾವಿ: ಸಿಟಿ ರವಿ ಅವರೇ ನಿಮ್ಮ ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆಯಿರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಟಿ ರವಿ ಅವರೇ ನಿಮ್ಮ ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆಯಿರಿ. ಮೈಗೆ ಹಚ್ಚಿರೊ ಕೊಳಕನ್ನು ತೊಳೆಯಬಹುದು.
Toe Ring: ವಿವಾಹಿತ ಮಹಿಳೆಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಈ ರೀತಿಯ ಕಾಲುಂಗುರ ಹಾಕಬಾರದು!
ಮನಸ್ಸಿಗೆ ಹಚ್ಚಿರೋ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ ಎಂದು ನನಗೂ ಹಿರಿಯರೊಬ್ಬರು ಹೇಳಿದ್ದಾರೆ,” ಎಂದು ತಿರುಗೇಟು ನೀಡಿದರು. ಸಿಟಿ ರವಿ ಅವರ ಮನಸ್ಸಿನಲ್ಲೇ ಕೊಳಕಿದೆ. ಅಂತಹ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ. ಅವರ ಆರೋಪದಿಂದ ಎರಡು ದಿನಗಳ ಕಾಲ ನಾನು ಸರಿಯಾಗಿ ನಿದ್ದೆ ಮಾಡಲಿಲ್ಲ,” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.