ಬೆಂಗಳೂರು:- ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ ಆಯೋಜನೆ ಮಾಡಲಾಗಿದ್ದು,
ಇಂದು ಭಾನುವಾರ ಸಂಡೇ ದಿನ ಅವರೆ ಬೇಳೆಯ ವೆರೈಟಿ ಫುಡ್ ಟೇಸ್ಟ್ ಅನ್ನು ಸಿಟಿ ಮಂದಿ ಫುಲ್ ಎಂಜಾಯ್ ಮಾಡಿದ್ದಾರೆ. 24ನೇ ಆವೃತ್ತಿಯ ಅವರೆ ಬೇಳೆ ಮೇಳದಲ್ಲಿ ರಜೆಯ ದಿನ ಜೋರಾಗಿತ್ತು. ಭಾನುವಾರ ಹಿನ್ನೆಲೆ ಅವರೆ ಬೇಳೆ ಮೇಳ ಫುಲ್ ರಶ್.. ರಶ್ ಆಗಿದೆ.
ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಮೇಳದಲ್ಲಿ ಸುತ್ತಾಡಿ ಸಿಟಿ ಜನ ಫುಡ್ ಸವಿಯುತ್ತಿದ್ದಾರೆ. ಜನವರಿ 5ಕ್ಕೆ ಈ ಮೇಳ ಆರಂಭವಾಗಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ
ಪಿಜ್ಜಾ, ಬರ್ಗರ್, ಕೆಎಫ್ಸಿ ತಿಂದು ಬೋರಾದ ಫುಡ್ ಪ್ರಿಯರಿಗೆ ಈಗ, ಅವರೇ ಫುಡ್ ಟೇಸ್ಟ್ ಮಾಡುವ ಅವಕಾಶ ನೀಡಲಾಗಿದೆ. ಹೀಗಾಗಿ ಬೇಳೆ ಪ್ರಿಯರಿಗೆ ಜಾತ್ರೆಯೋ ಜಾತ್ರೆ.. ಸ್ವೀಟ್ಸ್ ಗೂ ಸೈ, ಅವರೆ ಬೇಳೆ ಚಾಟ್ಸ್ ಗೂ ಸೈ ಎನ್ನುವಂತೆ ಸವಿದಿದ್ದಾರೆ.