ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಸೋಮವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ICC ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ: ಟೀಂ ಇಂಡಿಯಾ ಘೋಷಣೆ ವಿಳಂಬ ಸಾಧ್ಯತೆ!?
66/11 kV ಬಿಟಿಎಂ ವಿವಿ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಎಚ್.ಎಸ್.ಆರ್. ವಿಭಾಗದಲ್ಲಿನ ಹಲವು ಪ್ರದೇಶಗಳಲ್ಲಿ ಸೋಮವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಕಾವೇರಿನಗರ, ಹುಳಿಮಾವು, ಅಕ್ಷಯ ನಗರ, ಹೊಂಗಸಂದ್ರ, ಬಿ.ಟಿ.ಎಸ್ ಲೇಔಟ್, ಕೋಡಿಚಿಕ್ಕನಹಳ್ಲಿ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯಾ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ.
ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್ಇಎಲ್, ಐಐಎಸ್ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್ಲೈನ್ ರಸ್ತೆ, ಎಲ್ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಶರೀಫ್ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.