ವಿಜಯಪುರ: ವಿಜಯಪುರದ ಸಿಂದಗಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಸಿಗರೇಟ್ ಮಳಿಗೆ ಕಳ್ಳತನ ಪ್ರಕರಣವನ್ನ ಬೇಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ಈ ಕುರಿತು ಸಿಂದಗಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಎಸ್ ಪಿ ಋಷಿಕೇಶ್ ಸೋನವಾಣೆ ಈ ಕಳ್ಳತನ ಅಂತರರಾಜ್ಯ ಕೃತ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಂತರರಾಜ್ಯ ಕಳ್ಳನನ್ನ ಬಂಧಿಸಲಾಗಿದೆ. ಇನ್ನಿಬ್ಬರು ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದರು.
ಇನ್ನೂ ಸಿಂದಗಿ ಪಟ್ಟಣದ ಸಿಗರೇಟ್ ದಾಸ್ತಾನು ಮಳಿಗೆಯೊಂದರಿಂದ ಒಟ್ಟು 40 ಲಕ್ಷ 87 ಸಾವಿರ ಮೌಲ್ಯದ ಸಿಗರೇಟ್ ಕಳ್ಳತನ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎರಡು ತಂಡ ರಚನೆ ಮಾಡಿದ್ದರು. ಈ ತಂಡಗಳು ತನಿಖೆ ನಡೆಸಿ ರಾಜಸ್ಥಾನ ಮೂಲದ ಜಿತೇಂದ್ರಕುಮಾರ ಎನ್ನುವ ವ್ಯಕ್ತಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಇನ್ನಿಬ್ಬರ ತನಿಖೆಗೆ ಶೋಧ ಮುಂದುವರೆದಿದೆ ಎಂದರು. ಅಲ್ಲದೇ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸಿಗರೇಟ್ ಮಾರಾಟ ಮಾಡಿದ ನಂತರದ ನಗದು ಹಣ 37 ಲಕ್ಷ ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದರು.
ಇನ್ನೂ ಪ್ರಕರಣ ಬೇಧಿಸಿದ ತಂಡವನ್ನ ಶ್ಲಾಘಿಸಿದರು. ಇದೇ ವೇಳೆ ಎಸ್ಪಿ ರಿಷಿಕೇಶ್ ಅಪಘಾತ ಪ್ರಕರಣಗಳ ತಡೆಗಟ್ಟುವಿಕೆ. ರಸ್ತೆ ಸುರಕ್ಷತೆ ಕುರಿತು ಮಾತನಾಡಿದರು. ಅಲ್ಲದೇ ಕಳ್ಳತನ, ಅಪರಾಧ ಪ್ರಕರಣಗಳು ನಡೆದಾಗ ಸಾರ್ವಜನಿಕರು ಕೂಡಲೇ ದೂರು ದಾಖಲಿಸಿದರೆ ಪ್ರಕರಣ ಪತ್ತೆಗೆ ತನಿಖೆಗೆ ಪೊಲೀಸರಿಗೆ ಅನುಕೂಲವಾಗುತ್ತದೆ ಎಂದರು..