ಮಹೇಂದ್ರ ಸಿಂಗ್ ಧೋನಿ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಟ್ ಮಾಡಲಾಗಿದೆ. ಕ್ರಿಸ್ಮಸ್ ಟ್ರೀ ಕೂಡ ಸೂಪರ್ ಆಗಿಯೇ ಅರೇಂಜ್ ಆಗಿದೆ. ಮನೆಯಲ್ಲಿ ಪ್ರಿಪ್ರೇಶನ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಬಹುತೇಕ ಸಮಯವನ್ನು ಎಂ.ಎಸ್ ಧೋನಿ ತಮ್ಮ ಕುಟುಂಬದ ಜೊತೆ ಕಳೆಯುತ್ತಿದ್ದಾರೆ. ಸದ್ಯ ಧೋನಿ ಕ್ರಿಸ್ಮಸ್ ದಿನ ಸಾಂತಾ ಕ್ಲಾಸ್ ಬಟ್ಟೆಗಳನ್ನು ಹಾಕಿಕೊಂಡು ಹೆಂಡತಿ ಸಾಕ್ಷಿ, ಮಗಳು ಝೀವಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಸುಂದರ ಕೊಳವೊಂದು ಹಿನ್ನೆಲೆಯಲ್ಲಿರುವ ಕಟ್ಟಡದ ಹಾಲ್ ಒಂದರಲ್ಲಿ ಈ ಆಚರಣೆ ನಡೆಸಲಾಗಿದೆ. ಅಲಂಕರಿಸಲ್ಪಟ್ಟ ಕ್ರಿಸ್ ಮಸ್ ಟ್ರೀ ಮುಂದೆ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಸಾಂತಾಕ್ಲಾಸ್ ಡ್ರೆಸ್ ನಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
Toe Ring: ವಿವಾಹಿತ ಮಹಿಳೆಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಈ ರೀತಿಯ ಕಾಲುಂಗುರ ಹಾಕಬಾರದು!
ಕೆಲವು ಫೋಟೋಗಳಲ್ಲಿ ಅವರು ತಮ್ಮ ಗೆಳೆಯರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಧೋನಿ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೆಷನ್ ಮಾಡಲಾಗಿದ್ದು ಇದರಲ್ಲಿ ಬಾಲಿವುಡ್ ಸ್ಟಾರ್ ನಟಿ ಕೃತಿ ಸನೋನ್ ಸೇರಿ ಇನ್ನು ಕೆಲವರು ಭಾಗವಹಿಸಿದ್ದಾರೆ. ಇವೆಲ್ಲವನ್ನೂ ಸಾಕ್ಷಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.