ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯು ಬೆಂಗಳೂರಿನಲ್ಲಿ ಕ್ರಿಸ್ಮಸ್ ಕೇಕ್ ಶೋ ಪ್ರಾರಂಭವಾಗಿದೆ. ನ್ಯೂ ಪಾರ್ಲಿಮೆಂಟ್ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದ್ದು,ಇನ್ನೂ ಹಲವು ಕಲಾಕೃತಿಗಳ ಕೇಕ್ ಜನರ ಮನಸೂರೆಗೊಳ್ಳತ್ತಿವೆ.ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದೈವೀ ಕಳೆ ಇರುವ ದೇವಿ ದುರ್ಗಾಮಾತೆ, ಗಾಂಭೀರ್ಯತೆಯ ಕ್ಯೂಟ್ ಗಜರಾಜ, ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ , ಕಲಾಕೃತಿ, ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ-3,ಗೇಟರ್ ಗ್ರೋವ್ ಡಿಲೈಟ್: ದಿ ಎಡಿಬಲ್ ಇಂಡಿಯನ್ ಅಲ್ಲಿಗೇಟರ್, ಫ್ರೀ ಬಸ್, ಅಬ್ಬಬ್ಬ ಒಂದಾ ಎರಡ, ಎಷ್ಟೊಂದು ವೆರೈಟಿ ಕೇಕ್ ಗಳು,ಇವೆಲ್ಲವೂ ಈ ಬಾರಿಯ ಕ್ರಿಸ್ ಮಸ್ ಕೇಕ್ ಶೋನ ಹೈಲೈಟ್ಸ್.
ವರ್ಷದ ಕೊನೆಗೆ ಬರುವ ಕ್ರಿಸ್ಮಸ್ ಪ್ರಯುಕ್ತ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ 49ನೇ ವಾರ್ಷಿಕ ಕೇಕ್ ಪ್ರದರ್ಶನ ನಡೆಯುತ್ತಿದೆ. ಹಳೆ ವರ್ಷ ಅಂತ್ಯಕ್ಕೆ ಕೇಕ್ ಶೋ ಎಲ್ಲರನ್ನು ಹೊಸ ವರ್ಷಕ್ಕೆ 2024ಕ್ಕೆ ಸ್ವಾಗತಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಸಹ ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ , ಮೈ ಬೇಕರ್ಸ್ ಮಾರ್ಟ್ ಸಹಯೋಗದಲ್ಲಿ ಕೇಕ್ ಶೋ ನಡೆಯುತ್ತಿದ್ದು ಈ ವರ್ಷವು ಕೇಕ್ ಶೋನಲ್ಲಿ ಹೊಸ ಪಾರ್ಲಿಮೆಂಟ್ ಸೇರಿದಂತೆ ಅನೇಕ ಕಲಾಕೃತಿಗಳು ಅರಳಿವೆ. ಅನೇಕ ಬೇಕರಿ ಕಲಾವಿದರ ತಿಂಗಳು ಗಟ್ಟಲೆ ಶ್ರಮ ಇದರಲ್ಲಿದೆ. ನ್ಯೂ ಪಾರ್ಲಿಮೆಂಟ್ ಈ ಬಾರಿ ಪ್ರಮುಖ ಆಕರ್ಷಣೆ , ಈ ವರ್ಷ ಉದ್ಘಾಟನೆಗೊಂಡ ಪಾರ್ಲಿಮೆಂಟ್ ದೇಶದ ಹೆಮ್ಮೆಯಾಗಿದ್ದು, ಅದನ್ನು ಐದು ಮಂದಿ ಕಲಾವಿದರು ಸುಮಾರು 2.5 ತಿಂಗಳಲ್ಲಿ ಕೇಕಿನಲ್ಲಿ ಚಿತ್ರಿಸಿದ್ದಾರೆ. ಒಟ್ಟು 14 ಅಡಿ ಅಗಲ, 14 ಅಡಿ ಉದ್ದ ಮತ್ತು 09 ಅಡಿ ಎತ್ತರದಲ್ಲಿ ಸಂತನು, ಮಹೇಶ್, ಅರುಣ್, ಮೋಹಿತ್ ಮತ್ತು ಪ್ರಮೋದ್ ಇವರು 1120 ಕೇಕ್ ಬಳಸಿ ತಯಾರಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೇಕ್ ಶೋ ನೋಡುಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.ಜನರು ಕೇಕ್ ನಲ್ಲಿ ಅರಳಿರುವ ವಿವಿಧ ಕಲಾಕೃತಿಗಳನ್ನು ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ.
ಬೈಟ್; ರಾಘವೇಂದ್ರ, ಪ್ರೇಕ್ಷಕರು.
ಕೇಕ್ ತಿನ್ನಲು ಹೇಗೆ ಸಿಹಿಯೋ ಹಾಗೆ ನೋಡಲು ಕೂಡ ಅಂದವೆನಿಸುವುದೆ ಈ ಕೇಕ್ ಶೋ ನಿಂದಾಗಿ. ಕೇಕ್ ನಿಂದ ಇಂತಹ ಅದ್ಭುತ ಕಲಾಕೃತಿಗಳನ್ನು ರಚಿಸಿದ ಕಲಾವಿದರಿಗೆ ಹ್ಯಾಟ್ಸ್ ಆಫ್ ಹೇಳಲೆಬೇಕು.