ಸರ್ವಶಕ್ತ ಏಸುಕ್ರಿಸ್ತನ ಕ್ರಿಸ್ಮಸ್ ಆಚರಣೆಗೆ ಇಡೀ ವಿಶ್ವವೇ ಸಚ್ಚಾಗುತ್ತಿದೆ, ಇದರ ಜೊತೆಗೆ ನಗರದ ವಿವಿಧ ಚರ್ಚ್ ಗಳಲ್ಲಿ ಏಸುಪ್ರಭುವಿನ ಆರಾಧನೆ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಹಾಗೆ ಬೆಂಗಳೂರಿನ ಕೆಆರ್ ಪುರದ ಟಿಸಿ ಪಾಳ್ಯ ಮುಖ್ಯರಸ್ತೆಯಲ್ಲಿರುವ ಸಂತ ಅಂತೋಣಿ ಪುಣ್ಯ ಕ್ಷೇತ್ರದಲ್ಲೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತೋತ್ಸವ ಜ್ಯೂಬಲಿ ಜಾಥ ಕ್ರೈಸ್ತ ಬಾಂಧವರು ಹಮ್ಮಿಕೊಂಡಿದ್ದರು .
ವಂದನೆಯ ಸ್ವಾಮಿ ಸಿ .ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ವಾದ್ಯಗೋಷ್ಠಿಗಳ ಜೊತೆ ವಿವಿಧ ಕ್ರಿಸ್ಮಸ್ ಸ್ಥಬ್ಧ ಚಿತ್ರಗಳ ಒಳಗೊಂಡ ಕಲಾಕೃತಿಗಳು ಸೇರಿ ಸಂಗೀತ ಕಾರ್ಯಕ್ರಮದೊಂದಿಗೆ ಮೆರವಣಿಗೆ ಜಾಥ ಟಿಸಿ ಪಾಳ್ಯದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!
ಇನ್ನೂ ಕ್ರೈಸ್ತೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ ಭಾಂದವರು ಭಾಗಿಯಾಗಿದರು .ಅದರಲ್ಲಿ ಪುಟಾಣಿಗಳು ಸಂತ ಕ್ಲಾಕ್ , ಏಂಜಲ್ ಮಾದರಿಯ ಉಡುಪುಗಳನ್ನು ಧರಿಸಿ ಜಾಥದಲ್ಲಿ ಹೆಜ್ಜೆ ಹಾಕುತ್ತಾ ಮತ್ತಷ್ಟು ಮೆರುಗು ತಂದಿದ್ದರು . ಪ್ರಭು ಯೇಸುವಿನ ಆರಾಧನೆಯಲ್ಲಿ ಭಾಗಿಯಾಗಿದ್ದ ಸಹಸ್ರರು ಭಕ್ತರಿಗೆ ಪ್ರವೀಣ್ ರೆಡ್ಡಿ ಅನ್ನಪ್ರಸಾದ ವ್ಯವಸ್ಥೆಯನ್ನು ಸಹ ಆಯೋಜಿಸಿದ್ದರು..