ಜರ್ಮನ್ (GERMAN) ಮೂಲದ ಖ್ಯಾತ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ (CHRISTIAN OLIVER) ವಿಮಾನ ದುರ್ಘಟನೆಯಲ್ಲಿ ನಿಧನರಾಗಿದ್ದಾರೆ. ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಪ್ರವಾಸಕ್ಕೆಂದು ಸಣ್ಣ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದರು. ಅದು ಅಪಘಾತಕ್ಕೀಡಾಗಿ ಕೆರಿಬಿಯನ್ ಸಮುದ್ರಕ್ಕೆ ಬಿದ್ದಿತ್ತು
ಶುಕ್ರವಾರ ಕೆರಿಬಿಯನ್ ಸಮುದ್ರದ ಮಧ್ಯ ಇಂಥದ್ದೊಂದು ಘಟನೆ ನಡೆದಿದ್ದು, 51 ವರ್ಷದ ಕ್ರಿಶ್ಚಿಯನ್ ಆಲಿವರ್ ಹಾಗೂ ಹತ್ತು ವರ್ಷದ ಮತ್ತು ಹನ್ನೆರಡು ವರ್ಷದ ಇಬ್ಬರು ಪುತ್ರಿಯರು ನಿಧನರಾಗಿದ್ದಾರೆ. ಜೊತೆಗೆ ವಿಮಾನ ಪೈಲೆಟ್ ರಾಬರ್ಟ್ ಕೂಡ ಸಾವನ್ನಪ್ಪಿದ್ದಾರೆ
ಮೂಲಗಳ ಪ್ರಕಾರ ನಟ ಪ್ರಯಾಣಿಸುತ್ತಿದ್ದ ಲಘು ವಿಮಾನ ಸೇಂಟ್ ವಿನ್ಸೆಂಟ್ ಮತ್ತು ಕೆರಿಬಿಯನ್ ಗ್ರೆನಡೈನ್ಸ್ ದ್ವೀಪಗಳ ಭಾಗದ ಪ್ಯಾಗೆಟ್ ಫಾರ್ಮ್ ನಿಂದ ನಿರ್ಗಮಿಸಿದ್ದರು. ಈ ವಿಮಾನವು ದ್ವೀಪ ಸೆಂಟ್ ಲೂಸಿಯಾದಲ್ಲಿ ಲ್ಯಾಂಡ್ ಆಗಬೇಕಿತ್ತು. ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಸಮಸ್ಯೆ ಕಾಣಿಸಿಕೊಂಡಿದೆ. ವಿಮಾನ ನಿಯಂತ್ರಣಕ್ಕೆ ಬಾರದೇ ಪತನವಾಗಿದೆ.