ಕಲಬುರಗಿ: ಇತ್ತೀಚಿಗೆ ಸಿಎಂ ಸಲಹೆಗಾರರಾಗಿ ನೇಮಕವಾದ ಅಳಂದ ಶಾಸಕ BR ಪಾಟೀಲರಿಗೆ ಇವತ್ತು ಕಲಬುರಗಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಘಟಕ ಕಾರ್ಯಕ್ರಮ ಏರ್ಪಡಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗೆರವ ಸನ್ಮಾನ ಮಾಡಿ ಪಾಟೀಲರನ್ನ ಅಭಿನಂದಿಸಿದರು..ಹಾಲಿ ಮಾಜಿ ಸೇರಿದಂತೆ ಹಲವಾರು ಕೈ ನಾಯಕರು ಸಮಾರಂಭದಲ್ಲಿ ಹಾಜರಿದ್ದರು..ಸಿಎಂ ಸಲಹೆಗಾರರಾಗಿ ಇದೇ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ ಹಿನ್ನಲೆ ಸನ್ಮಾನ ಸಮಾರಂಭ ವಿಶೇಷವಾಗಿತ್ತು.