ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ಸ್ನ ಜಾವೆಲಿನ್ (Javelin) ಎಸೆತದಲ್ಲಿ ಬೆಳ್ಳಿ (Silver) ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ನೀರಜ್ ಚೋಪ್ರಾ: ಎಎಫ್ಐ ಮೆಚ್ಚುಗೆ
ಹರಿಯಾಣದ ಪಾಣಿಪತ್ನ ಖಂಡಾರಾದಲ್ಲಿರುವ ನೀರಜ್ ಚೋಪ್ರಾ ಮನೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ‘ಪ್ರತಿಯೊಬ್ಬರಿಗೂ ಒಂದು ದಿನವಿದೆ, ಇಂದು ಪಾಕಿಸ್ತಾನದ ದಿನ, ಆದರೆ ನಾವು ಬೆಳ್ಳಿ ಪದಕ ಗೆದ್ದಿರುವುದು ಹೆಮ್ಮೆ ತಂದಿದೆ. ಮಗನಿಗೆ ಮೊದಲೇ ಗಾಯವಾಗಿತ್ತು. ಆ ಗಾಯದಿಂದ ಚಿನ್ನ ಗೆಲ್ಲಲು ಹಿನ್ನಡೆ ಆಗಿರಬಹುದು ಎಂದು ನೀರಜ್ ಚೋಪ್ರಾ ತಂದೆ ಸತೀಶ್ ಕುಮಾರ್ ಹೇಳಿದ್ದಾರೆ.
ನೀರಜ್ ಬೆಳ್ಳಿ ಗೆದ್ದಿದ್ದಕ್ಕೆ ನಮಗೆ ತುಂಬಾ ಖುಷಿಯಾಗುತ್ತಿದೆ, ನಮಗೆ ಬೆಳ್ಳಿಯೂ ಬಂಗಾರಕ್ಕೆ ಸಮಾನ ಎಂದು ನೀರಜ್ ಚೋಪ್ರಾ ತಾಯಿ ಸರೋಜ್ ದೇವಿ ಹೇಳಿದ್ದಾರೆ. ಅವರು ಗಾಯಗೊಂಡಿದ್ದಾರೆ, ಆದರೂ ಆತನ ಪ್ರದರ್ಶನದಿಂದ ನಮಗೆ ಸಂತೋಷವಾಗಿದೆ ಎಂದಿದ್ದಾರೆ.
2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು. 6 ಅವಕಾಶಗಳ ಪೈಕಿ 5 ಪ್ರಯತ್ನಗಳಲ್ಲಿ ಫೌಲ್ ಆಗಿದ್ದ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದರು.