ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಆಲಗಟ್ಟ ಗ್ರಾಮದಲ್ಲಿ ಪದೇಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಹೌದು ಇಂದು ಬೆಳಗ್ಗೆ 6:00 ಗ್ರಾಮದ ಮೂರ್ತಪ್ಪ ಎಂಬುವರ ತೋಟದ ಬಳಿಯ ಕಲ್ಲಿನ ಪಕ್ಕದಲ್ಲಿರುವ ಬೇವಿನ ಮರಕ್ಕೆ ಅವಿದುಕೊಂಡಿದ್ದು ಇದನ್ನು ಗಮನಿಸಿದ ರೈತ ಓಡಿ ಬಂದು ಊರಿನ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಗ್ರಾಮಸ್ಥರೆಲ್ಲರೂ ಅವಿತುಕೊಂಡ ಚಿರತೆಯ ಸ್ಥಳಕ್ಕೆ ಹೋಗಿ ಮೊಬೈಲಲ್ಲಿ ವಿಡಿಯೋ ಮಾಡುವಾಗ ಆ ಸಂದರ್ಭದಲ್ಲಿ ಚಿರತೆಯು ವಿಡಿಯೋ ಮಾಡುತ್ತಿರುವವರ ಮೇಲೆ ಎಗರಿದೆ ಭಯಗೊಂಡ ಗ್ರಾಮಸ್ಥರು ಓಡಿ ಹೋಗಿದ್ದಾರೆ.
ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣಗೊಂಡಿದೆ ಅರಣ್ಯ ಅಧಿಕಾರಿಗಳು ಇದ್ದ ಕಡೆ ಗಮನ ಹರಿಸಿ ಒಂಟಿಯಾಗಿರುವ ಚಿರತೆಯನ್ನು ಹಿಡಿದು ಬೇರೆ ಕಡೆಗೆ ಬಿಡಬೇಕಾಗಿದೆ ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.