ಚಿತ್ರದುರ್ಗ: ನಾಯಿ ಕಚ್ಚಿದ ಸ್ಥಿತಿಯಲ್ಲಿ ಅರ್ಧ ದೇಹವಿರುವ ಶಿಶುವಿನ ಶವ ಪತ್ತೆಯಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಶಿಶುವಿನ ಅರ್ಧಭಾಗ ಮಾತ್ರ ಪತ್ತೆಯಾಗಿದೆ. ಬೀದಿನಾಯಿಗಳು ಎಳೆದಾಡಿರುವ ಶಿಶು ಶವ ಭಯಾನಕವಾಗಿ ಕಾಣುತ್ತಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಆವರಣದಿಂದ ನಾಯಿಗಳು ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ.
ನಿಮಗೆ ಈ ಸಮಸ್ಯೆಗಳಿದ್ಯಾ..? ಹಾಗಾದ್ರೆ ದಿನಕ್ಕೊಂದು ಗೆಣಸು ತಿನ್ನಿ, ಆಮೇಲೆ ಮ್ಯಾಜಿಕ್ ನೋಡಿ!
ಮೃತ ಶಿಶು ಸೂಕ್ತ ಡಿಸ್ಪೋಸ್ ಮಾಡದ ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿಬಂದಿದೆ. ಬೇಕಾಬಿಟ್ಟಿಯಾಗಿ ಶಿಶು ಮೃತದೇಹ ಆವರಣದಲ್ಲಿ ಬಿಸಾಡಿರುವ ಹಿನ್ನೆಲೆ ಬೀದಿನಾಯಿಗಳು ಎಳೆದು ತಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.