ಚಿತ್ರದುರ್ಗ:-ಅನುಮಾನಾಸ್ಪದವಾಗಿ ಸ್ಟಾಪ್ ನರ್ಸ್ ದುರ್ಮರಣ ಹೊಂದಿರುವ ಘಟನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಜರುಗಿದೆ.
ದಶಕಗಳ ನಂತರ ಕಾಂಗ್ರೆಸ್ಗೆ ವಾಪಸ್ಸಾಗಿದ್ದೇನೆ, ಖುಷಿ ತಂದಿದೆ: CP ಯೋಗೇಶ್ವರ್!
ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಮೂಲದ ನರ್ಸ್ ಇಂದ್ರಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಹಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು.
ನಿನ್ನೆ ಸಂಜೆ ಇಂದ್ರಮ್ಮನ ಸ್ನೇಹಿತೆ ಬೀಗದ ಕೀಯನ್ನು ಮೇಲಿಂದ ಕೆಳಗೆ ಎಸೆದಿದ್ದರು. ಆಗ ಬೀಗದ ಕೀ ಆಯತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅದನ್ನು ಕಟ್ಟಿಗೆಯಿಂದ ತೆರವುಗೊಳಿಸಲು ಮುಂದಾಗಿದ್ದ ಇಂದ್ರಮ್ಮ ಕೆಳಗೆ ಬಿದ್ದಿದ್ದಾರೆ.
ಆಕೆಯ ತಲೆಗೆ ಬಲವಾದ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಈ ವೇಳೆ ಅವರನ್ನು ಬಸವೇಶ್ವರ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾರ್ಗಮಧ್ಯೆ ಅಸುನೀಗಿದ್ದಾರೆಂದು, ಸಹೊದ್ಯೋಗಿಗಳು ತಿಳಿಸಿದರು.