ಇಂದು ಅಕ್ಷಯ ತೃತೀಯ. ಈ ಹಿನ್ನೆಲೆಯಲ್ಲಿ ಇಂದು ಬಂಗಾರ ಖರೀದಿಸಲು ಜನ ಮುಂದಾಗಿದ್ದಾರೆ. ಬಂಗಾರ ಬೆಲೆ ಗಗನಕ್ಕೇರಿದ್ದರು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ.
ಅಕ್ಷಯ ತೃತೀಯದಂದು ಭಾರತದಲ್ಲಿ ಚಿನ್ನದ ಬೆಲೆ 70,000 ರೂಪಾಯಿ ಆಸುಪಾಸಿನಲ್ಲಿದೆ. ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲ ಶೇಕಡ 13% ಹೆಚ್ಚಳವಾಗಿದೆ.
ಇಂದಿನ ಬಂಗಾರದ ಬೆಲೆ 70,000 ರೂಪಾಯಿ ಆಸುಪಾಸಿನಲ್ಲಿರುವಾಗ ಚಿನ್ನ ಖರೀದಿಸುವುದು ಸೂಕ್ತವೇ? ಎಂಬ ಪ್ರಶ್ನೆ ಸಹಜ. ಆದರೆ, ಸಿಎನ್ಬಿಸಿ ಟಿವಿ 18ನಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದ್ದ ವೇಳೆ ಪರಿಣತರು,”ಯಾರೇನೇ ಹೇಳಿ ಚಿನ್ನದ ದರ ಕಳೆದ ಅಕ್ಷಯ ತೃತೀಯಕ್ಕೆ ಹೋಲಿಸಿದರೆ ಈಗ ಶೇಕಡ 13 ಹೆಚ್ಚಳವಾಗಿದೆ” ಎಂದು ಹೇಳಿದ್ದು ಗಮನಸೆಳೆಯಿತು.
ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಗಮನಿಸಿದರೆ 2014 ರಿಂದೀಚೆಗೆ ವಾರ್ಷಿಕವಾಗಿ ಬಂಗಾರದ ಬೆಲೆ ಸಾಕಷ್ಟು ಏರಿಕೆ ಕಂಡಿದೆ.
ಚಿನ್ನದ ಬೆಲೆ ಏರುಗತಿಯಲ್ಲಿ ಇರುವ ಕಾರಣ ಖರೀದಿಸಿದರೆ ನಷ್ಟವಿಲ್ಲ ಎಂಬುದು ಬಹಳಷ್ಟು ಪರಿಣತರ ಅಭಿಪ್ರಾಯ. ಆದರೆ, ಚಿನ್ನದ ಆಭರಣಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಗಟ್ಟಿ ಅಥವಾ ಗೋಲ್ಡ್ ಬಾಂಡ್ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎನ್ನುತ್ತಾರೆ ಅನೇಕರು.