ಬ್ಯಾಡ್ಮಿಂಟನ್ ಪಂದ್ಯವಾಡುವಾಗ ಚೀನಾದ ಆಟಗಾರ ಹೃದಯಾಘಾತವಾಗಿ ಮೈದಾನದಲ್ಲೆ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಸಂಭವಿಸಿದ್ದು ಇಂಡೋನೇಷ್ಯಾದಲ್ಲಿ ನಡೆದ ಪಂದ್ಯಾವಳಿಯ ವೇಳೆ ಆಗಿದ್ದು ಎಲ್ಲರ ಮನಕಲಕುವಂತ ದೃಶ್ಯವಾಗಿತ್ತು.
17 ವರ್ಷದ ಚೀನಾದ ಬ್ಯಾಡ್ಮಿಂಟನ್ ಆಟಗಾರ ಜಾಂಗ್ ಝಿಜಿ ಅಂಗಳದಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನೆಲಕ್ಕೆ ಬಿದ್ದರೂ ಯಾರೊಬ್ಬರು ಮೇಲೆತ್ತಲು ಮೈದಾನದ ಒಳಗೆ ಬಂದಿಲ್ಲ. ಒಬ್ಬರು ಒಳಗೆ ಬರಲು ಯತ್ನಿಸಿದಾದ್ರು ಅಂಪೈರ್ ನಿರ್ಣಯದ ಮೇರೆಗೆ ವಾಪಸ್ ಹೋದರು. ಬಳಿಕ ವೈದ್ಯಕೀಯ ತಂಡ ಆಗಮಿಸಿ ಆಟಗಾರನನ್ನ ಹೊತ್ತುಕೊಂಡು ಹೋದರು. ಆದರೆ ಅಷ್ಟೊತ್ತಿಗೆ ಜೀವ ಹೋಗಿತ್ತು ಎಂದು ಹೇಳಲಾಗಿದೆ.
`ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’: ಇನ್ಸ್ಟಾದಲ್ಲಿ ಹಂಚಿಕೊಂಡ ಶೊಯೇಬ್ ಅಖ್ತರ್
ಇಬ್ಬರು 1-1 ಅಂಕಗಳಿಂದ ಸರಿಸಮನವಾಗಿ ಆಡುತ್ತಿದ್ದರು. ಆಗ ಕಾರ್ಡಿಕ್ ಅರೆಸ್ಟ್ನಿಂದ ಚೀನಾದ ಪ್ಲೇಯರ್ ನೆಲಕ್ಕೆ ಬಿದ್ದಿದ್ದಾರೆ. ಮೈದಾನದಲ್ಲಿ ಬಿದ್ದು ಒದ್ದಾಡುತ್ತಿದ್ದರು ತಕ್ಷಣಕ್ಕೆ ಆತನ ಬಳಿಗೆ ಯಾರು ಬರಲಿಲ್ಲ ಎನ್ನುವುದು ದೃಶ್ಯದಲ್ಲಿ ಸೆರೆಯಾಗಿದೆ.