ಬೆಂಗಳೂರು: ಗೋವಾದ (Goa) ಹೋಟೆಲ್ ಒಂದರಲ್ಲಿ ತನ್ನ 4 ವರ್ಷದ ಮಗುವನ್ನು ಹತ್ಯೆಗೈದು ಸಾಗಿಸುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಬೆಂಗಳೂರಿನ (Bengaluru) ಸ್ಟಾರ್ಟಪ್ ಕಂಪನಿಯ ಸಿಇಒ ಸುಚನಾ (Suchana Seth) ಪ್ರಕರಣದಲ್ಲಿ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಪೊಲೀಸರ (Police) ತನಿಖೆ ವೇಳೆ ಆಕೆಯ ಮಗುವಿನ ಮುಖ ಗಂಡನನ್ನೇ ಹೋಲುತ್ತಿತ್ತು ಇದೇ ಕಾರಣಕ್ಕೆ ಆಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಗುವಿನ ಮುಖದ ಚಹರೆ ತನ್ನ ಪತಿಯ ಮುಖವನ್ನೇ ಹೋಲುತ್ತದೆ ಎಂದು ಮಹಿಳೆ ತನ್ನ ಸ್ನೇಹಿತರೊಂದಿಗೆ ಹಲವು ಬಾರಿ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಮತ್ತು ನಮ್ಮಿಬ್ಬರ ನಡುವಿನ ಹಳೆಯ ಸಂಬಂಧ ನೆನಪಿಗೆ ಬರುತ್ತದೆ ಎಂದು ಸುಚನಾ ಹೇಳಿಕೊಂಡಿದ್ದರು. ಇದೇ ಮಗುವಿನ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗೋವಾದಲ್ಲಿ ಮಗುವಿನ ಹತ್ಯೆ ಮಾಡಿ ಶವವನ್ನು ಸೂಟ್ಕೇಸ್ನಲ್ಲಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದ ಸಮಯದಲ್ಲಿ ಮಹಿಳೆಯನ್ನು ಕ್ಯಾಬ್ ಚಾಲಕನ ಸಹಾಯದಿಂದ ಚಿತ್ರದುರ್ಗದ ಪೊಲೀಸರು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು. ಈ ಸಂಬಂಧ ಗೋವಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ