10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುವುದು ಕಣ್ಣಿಗೆ ಹಾನಿಕಾರಕ ಜೊತೆಗೆ ದೈಹಿಕ ಆರೋಗ್ಯವು ಹದಗೆಡುತ್ತದೆ ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳ ಪ್ರಕಾರ, ಐದು ವರ್ಷದೊಳಗಿನ ಮಕ್ಕಳು ಮೊಬೈಲ್ ಪರದೆಗಳನ್ನು ವೀಕ್ಷಿಸಲು ಕಡಿಮೆ ಸಮಯವನ್ನು ಕಳೆಯಬೇಕು. ಯುಎನ್ ಆರೋಗ್ಯ ಸಂಸ್ಥೆ ಶಿಶುಗಳು ಮತ್ತು 1 ವರ್ಷದ ಮಗುವಿಗೆ ಪರದೆಯ ಸಮಯವನ್ನು ಶಿಫಾರಸು ಮಾಡದಿದ್ದರೂ, 2 ವರ್ಷ ವಯಸ್ಸಿನವರು ಒಂದು ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ನೋಡಬಾರದು ಎಂದು ತಿಳಿಸಿದೆ.
ಒಂದೂವರೆ ವರ್ಷ ವಯಸ್ಸಿನ ಮಕ್ಕಳಿಗೆ ಸಹ ಪೋಷಕರು ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಿದ್ದಾರೆ ಎಂದು ಗುರುಗ್ರಾಮದ ಮೇದಾಂತ ದಿ ಮೆಡಿಸಿಟಿಯ ಪೀಡಿಯಾಟ್ರಿಕ್ ಕೇರ್ನ ಪೀಡಿಯಾಟ್ರಿಕ್ ಪಲ್ಮೊನಾಲಜಿ, ಕ್ರಿಟಿಕಲ್ ಕೇರ್ ಪೀಡಿಯಾಟ್ರಿಕ್ಸ್ (ಪಿಐಸಿಯು) ನಿರ್ದೇಶಕ ಡಾ.ರಾಜೀವ್ ಉತ್ತಮ್ ಹೇಳಿದರು.
“ಅತಿಸಾರ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಂತಹ ಕಾಯಿಲೆಗಳು ತಮ್ಮ ಮೊಬೈಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳಲ್ಲಿ ಕಂಡುಬರುತ್ತವೆ” ಎಂದು ವೈದ್ಯರು ತಿಳಿಸಿದ್ದಾರೆ.
ಸ್ಮಾರ್ಟ್ಫೋನ್ ಬಳಕೆಯು ಕಣ್ಣಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಮಕ್ಕಳಲ್ಲಿ ಸ್ಮಾರ್ಟ್ ಫೋನ್ ಗಳ ದೀರ್ಘಕಾಲದ ಬಳಕೆಯು ದೃಷ್ಟಿ ದೌರ್ಬಲ್ಯ ಮತ್ತು ಒಣ ಕಣ್ಣುಗಳ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.