ಚಾಮರಾಜನಗರ : ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪವಾಡ ರೀತಿಯಲ್ಲಿ ಮಕ್ಕಳು ಪತ್ತೆಯಾದ ಘಟನೆ ನಡೆದಿದೆ. ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಮೂರನೇ ಹಂತದ ನಿವಾಸಿಗಳಾದ ವಿದ್ಯಾಶ್ರೀ ಹಾಗೂ ಮಹೇಶ್ ದಂಪತಿ ಪುತ್ರ ಪ್ರವೀಣ್ ಹಾಗೂ ಪ್ರವೀಣ್ ಸ್ನೇಹಿತ ರವಿ ಶನಿವಾರ ನಾಪತ್ತೆಯಾಗಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ಪಾಲಕರು ದಾಖಲಿಸಿದ್ದರು.
ಮಕ್ಕಳು ಕಾಣೆಯಾದ ಹಿನ್ನೆಲೆಯಲ್ಲಿ ಪಾಲಕರು ಅವರ ಮನೆದೇವರಾದ ಪವಾಡ ಪುರುಷ ಮಲೈಮಹದೇಶ್ವರಬೆಟ್ಟದ ಮಾದಪ್ಪನಲ್ಲಿ ಹರಕೆ ಹೊತ್ತು ಉರುಳು ಸೇವೆ ಮಾಡುತ್ತಿದ್ರು. ಈ ವೇಳೆಯಲ್ಲಿ ನಾಪತ್ತೆಯಾದವರು ಮಾದಪ್ಪನ ಸನ್ನಿಧಿಯಲ್ಲಿ ಪೋಷಕರ ಎದುರು ಪವಾ ಸದೃಶ್ಯರಂತೆ ಪ್ರತ್ಯಕ್ಷಕೊಂಡಿದ್ದಾರೆ.
ಇದರಿಂದ ಆಶ್ಚರ್ಯಚಕಿತರಾದ ಪೋಷಕರು ಬೆಂಗಳೂರಿನ್ಳಿ ಕಾಣೆಯಾದವರು ಮಾದಪ್ಪನಲ್ಲಿ ಹರಕೆ ಹೊತ್ತ ಕೆಲವೇ ಹೊತ್ತಿನಲ್ಲಿಯೆ ಅದು ಮಾದಪ್ಪನ ಸನ್ನಿಧಿಯಲ್ಲಿಯೇ ಸಿಕ್ಕಿದ್ದಕ್ಕೆ ಹಾಗೂ ಮಾದಪ್ಪನ ಪವಾಡಕ್ಕೆ ಉಘೇ ಎಂದಿದ್ದಾರೆ.