ಶಿವಮೊಗ್ಗ: 2024 ಡಿಸೆಂಬರ್ 31 ರೊಳಗೆ ಸರಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸುವಂತಿಲ್ಲ ಡೆಸ್ಕ್ ಜಾರಿ ಮಾಡ್ತೇವೆ ಯಾರು ಕೂಡಾ ನೆಲದ ಮೇಲೆ ಕುಳಿತುಕೊಳ್ಳಬಾರದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 2024 ಡಿಸೆಂಬರ್ 31 ರೊಳಗೆ ಸರಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸುವಂತಿಲ್ಲ,
ಡೆಸ್ಕ್ ಜಾರಿ ಮಾಡ್ತೇವೆ ಯಾರು ಕೂಡಾ ನೆಲದ ಮೇಲೆ ಕುಳಿತುಕೊಳ್ಳಬಾರದು ಎಂದು ಹೇಳಿದರು. ಬಿಜೆಪಿ ಪ್ರತಿಭಟನೆ ವಿಚಾರವಾಗಿ ಅವರಿಗೆ ಕೆಲಸ ಇಲ್ಲ ಪ್ರತಿಭಟನೆ ಮಾಡ್ತಿದ್ದಾರೆ. ಅದು ದುರುದ್ದೇಶದಿಂದ ಮಾಡ್ತಿದ್ದಾರೆ. ಈಗ ಬಿಜೆಪಿಯವರು 67 ಸೀಟ್ ಇದ್ದಾರೆ. ಹೀಗೆ ಆದರೆ 27 ಕ್ಕೆ ಬರುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.
Cashews Benefits: ಪ್ರತಿದಿನ ಗೋಡಂಬಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನವಿದೆ ಗೊತ್ತಾ..?
ಇನ್ನೂ ಸಿದ್ದರಾಮಯ್ಯ ಸರಕಾರ ಯುವಕರಿಗೆ ಹಣ ಕೊಡ್ತಿದೆ. ಯುವಕರು ಧೈರ್ಯವಾಗಿರಿ ನಿಮ್ಮ ಪರ ನಾವಿದ್ದೇವೆ. 25 ಸಾವಿರ ಯುವಕರು ನೋಂದಣಿ ಮಾಡಿಸಿದ್ದಾರೆ. ಇನ್ನೂ ಹೆಚ್ಚಿನ ಯುವಕರು ನೋಂದಣಿ ಮಾಡಿಸಿ ಎಂದರು.
ಬೆಳಗಾವಿಯ ನಂದಿಹಳ್ಳಿ ಗ್ರಾಮದಲ್ಲಿ ಕನ್ನಡ ಮಕ್ಕಳಿಗೆ ತಾರತಮ್ಯ ವಿಚಾರವಾಗಿ ಮಾಧ್ಯಮದ ಮೂಲಕ ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ಸಚಿವ ಸತೀಶ್ ಜಾರಕಿಹೊಳಿ ಹಾಗು ಲಕ್ಷ್ಮಿ ಹೆಬ್ಬಾಳ್ಕರ್ ಗಮನಕ್ಕೆ ವಿಷಯ ಇದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕ್ರಮ ವಹಿಸುತ್ತೇವೆ.