ರಾಹುಲ್ ದ್ರಾವಿಡ್ ಅವರ ಭಾರತ ತಂಡದ ಹೆಡ್ ಕೋಚ್ ಅವಧಿ ಬಳಿಕ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಭಾರತ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಿಸಿತ್ತು. ಇದೀಗ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಇದೀಗ ಒಡಿಐ ಸರಣಿಯ ಕೊನೆಯ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ಅವರು, ಟೀಮ್ ಇಂಡಿಯಾದ ಹೆಡ್ ಕೋಚ್ ಬಗ್ಗೆ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಮುನ್ನ ಗೌತಮ್ ಗಂಭೀರ್ ಅವರು, ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಯನ್ನು ಟೀಕಿಸಿದ್ದರು. 2007 ಮತ್ತು 2011ರ ವಿಶ್ವಕಪ್ ಟೂರ್ನಿಗಳಲ್ಲಿನ ಗೆಲುವಿನ ಶ್ರೇಯ ಕೇವಲ ಎಂಎಸ್ ಧೋನಿ ನೀಡಲಾಗುತ್ತಿದೆ. ಇದರ ಬದಲು ಎಲ್ಲರಿಗೂ ಸಲ್ಲಬೇಕೆಂದು ಅವರು ಹೇಳಿದ್ದರು. ಅಂದ ಹಾಗೆ ಇದೇ ರೀತಿಯ ವಿಷಯಗಳಿಗೆ ಅವರು ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದರು. ಇತ್ತೀಚೆಗೆ ಅಂಡರ್ 19 ವಿಶ್ವಕಪ್ ವಿಜೇತ ಮಂಜೋತ್ ಕಲ್ರಾ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಗಂಭೀರ್ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್, ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಕೂಡ ಇಂಗ್ಲೆಂಡ್ ತಂಡದ ಕೋಚ್ ಹುದ್ದೆಯ ಸೂಕ್ತ ಅಭ್ಯರ್ಥಿ: ಮ್ಯಾಥ್ಯೂ ಮಾಟ್
ಗೌತಮ್ ಗಂಭೀರ್ ಇನ್ನೂ ಮಗುವಿದ್ದಂತೆ ಎಂದು ಹೇಳಿಕೊಂಡಿದ್ದಾರೆ. ಅವರು 12 ವರ್ಷದ ಮಗುವಿನ ರೀತಿ ತುಂಬಾ ಮುಗ್ದರು ಎಂದು ಬಣ್ಣಿಸಿದ್ದಾರೆ. ಅವರೇ ಆಕ್ರಮಣವಾಗಿ ವರ್ತಿಸಿದರೂ ಕೂಡ ಅವರ ಉದ್ದೇಶ ತಂಡವನ್ನು ಗೆಲ್ಲಿಸುವುದಾಗಿರುತ್ತದೆ. ಪಂದ್ಯದಲ್ಲಿ ಏನಾದರೂ ಸೋತರೆ ಗಂಭೀರ್ ಅಳುತ್ತಿದ್ದರು ಎಂಬ ಅಂಶವನ್ನು ಅವರು ರಿವೀಲ್ ಮಾಡಿದ್ದಾರೆ.
“ಗೌತಮ್ ಗಂಭೀರ್ ಅವರು ಮಗುವಿದ್ದಂತೆ. ಇವತ್ತಿಗೂ ಕೂಡ ಅವರು ಮುಗ್ದ ಮಗು. ಅವರಿಗೆ ಯಾವುದೇ ದುರುದ್ದೇಶವಿಲ್ಲ. ಅವರು ಒಂದು ರೀತಿ 12 ವರ್ಷದ ಮಗುವಿದ್ದಂತೆ. ಜನರು ಅವರನ್ನು ದುರಹಂಕಾರಿ ಎಂದು ಭಾವಿಸುತ್ತಾರೆ, ಆದರೆ ಅದು ಅವರ ವರ್ತನೆ ಗೆಲ್ಲುವ ಕಡೆಗೆ. ನಾನು ಅವನನ್ನು ನೆಟ್ಸ್ ನಂತರ ಮ್ಯಾಚ್ ಆಡುವಂತೆ ಮಾಡುತ್ತಿದ್ದೆ ಮತ್ತು ಪಂದ್ಯಗಳಲ್ಲಿ ಸೋತ ನಂತರ ಅವರು ಅಳುತ್ತಿದ್ದನು. ಆಗ ಅವನಿಗೆ ಸೋಲುವುದು ಇಷ್ಟವಿರಲಿಲ್ಲ,” ಎಂದು ಸಂಜಯ್ ಭಾರದ್ವಾಜ್ ತಿಳಿಸಿದ್ದಾರೆ.