ಬೆಂಗಳೂರು: ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಇನ್ನು HMPV ಸೋಂಕಿತ 8 ತಿಂಗಳ ಮಗು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದೆ.
ಸೋಮವಾರ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಫತ್ರೆಗೆ ಭೇಟಿ ಮಗುವಿನ ಪೋಷಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದರು. ಸದ್ಯಕ್ಕೆ ಮಗು ಈಗ ಆರೋಗ್ಯವಾಗಿದೆ.
ಸೋಮವಾರವೇ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ವೈದ್ಯರು ಇಂದು ಒಂದು ದಿನ ಇರಲಿ ನಿಗಾದಲ್ಲಿ ಅಂತಾ ಚಿಕಿತ್ಸೆ ನೀಡಿದ್ದರು. ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆಯಾಗಿತ್ತು. ಸೋಂಕು ಕಾಣಿಸಿದ 3 ತಿಂಗಳ ಮಗು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ.