ಆನೇಕಲ್:- ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಅವಘಡ ಒಂದು ಸಂಭವಿಸಿದೆ. ಕೆಲಸ ಮಾಡುತ್ತಿದ್ದ ವೇಳೆ ಬಾಲ ಕಾರ್ಮಿಕನ ಬಲಗೈ ನಜ್ಜುಗುಜ್ಜಾಗಿದೆ. ಘಟನೆ ಬಳಿಕ ಕಾರ್ಖಾನೆ ಮಾಲೀಕರು ಎಸ್ಕೇಪ್ ಆಗಿದ್ದಾರೆ.
Hibiscus Benefits: ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲು-ಚರ್ಮದ ಆರೋಗ್ಯಕ್ಕೂ ಬೇಕು!
ಗಂಭೀರವಾಗಿ ಗಾಯಗೊಂಡ ಬಾಲ ಕಾರ್ಮಿಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ವರ್ಷದ ಬಾಲಕಾರ್ಮಿಕನನ್ನು ಅಸ್ಸಾಂ ಮೂಲದವ ಎನ್ನಲಾಗಿದೆ. ಕಳೆದ 18ನೇ ತಾರೀಖು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪಂಚಿಂಗ್ ಮಷಿನ್ ನಲ್ಲಿ ಕೈ ಸಿಲುಕಿದ ಹಿನ್ನೆಲೆ ಬಲಗೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇನ್ನೂ ಘಟನೆ ಬಳಿಕ ಕಂಪನಿ ಮಾಲೀಕರಾದ ಹೇಮಂತ್ ಅಗರ್ವಾಲ್ ಮತ್ತು ಪ್ರೀತಿ ಎಂಬುವವರು ಕೇವಲ 30 ಸಾವಿರ ಆಸ್ಪತ್ರೆಗೆ ದಾಖಲಿಸಿ ಎಸ್ಕೇಪ್ ಆಗಿದ್ದಾರೆ.
ಇನ್ನೂ ಈ ಬಾಲಕನಿಗೆ ಸರ್ಜರಿ ಮಾಡದಿದ್ದರೆ ಪೂರ್ಣ ಕೈ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.