ಚಿಕ್ಕೋಡಿ: ಚರಂಡಿಯಲ್ಲೂ ದುಡ್ಡು ತಿಂತಾರಾ? ಜನ … ಎಂಥಾ ಕರ್ಮ ನೋಡಿ ಆಶ್ಚರ್ಯ ಅನಿಸಿದರೂ ಇದು ನಿಜ .
ಹೌದು,,, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ವ್ಯವಸ್ಥೆಯಲ್ಲಿ ಕಳಪೆ ಗುಣಮಟ್ಟತೆ ಕಂಡು ಬಂದಿದೆ.
ಗ್ರಾಮದ ಪ್ರಮುಖ ಬೀದಿಯಲ್ಲಿ…. ಇಲಾಖೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿಯಲ್ಲಿ ಕಳಪೆ ಸಾಮಗ್ರಿ ಹಾಗೂ ಯೋಜನೆ ಆಧಾರದನ್ವಯ ಕಾಮಗಾರಿ ನಡೆಯುತ್ತಿಲ್ಲ ಎಂದು ಸ್ಥಳೀಯರು.. ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳೀಯರೆ ಹೇಳುವ ಹಾಗೆ ದೃಶ್ಯದಲ್ಲಿ ಗಮನಿಸಬಹುದು ಚರಂಡಿಯ ಎರಡು ಬದಿ ಪ್ಲೇಟ್ ಅಳವಡಿಸಿ ಕಾಂಕ್ರಿಟ್ ವೆವಸ್ಥೆ ಕಲ್ಪಿಸುವ ಬದಲು ಮನಸೊ ಇಚ್ಛೆಯಂತೆ ತಾರಾತುರಿಯಲ್ಲಿ ನಡೆಸಿರೊ ಕಾಮಗಾರಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ
ಕೂಡಲೆ ಸ್ಥಳೀಯ ಅಧಿಕಾರಿಗಳು ಇಂಥಹ ಕಳಪೆ ಕಾಮಗಾರಿ ನಿಲ್ಲಿಸಿ ವೆವಸ್ಥಿತ ಚರಂಡಿಗೆ ವೆವಸ್ಥೆ ನಿರ್ಮಾಣ ಮಾಡಿ ಕೊಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.