ಅಥಣಿ:ಅದೊಂದು ಸುಂದರ ಕುಟುಂಬ,ಇಡಿ ಊರಿನ ಜನರೆ ಇವರನ್ನ ಕಂಡ್ರೆ ಕೈ ಮುಗಿತಿದ್ರುು
ಸಾರಿಗೆ ನೌಕರರ ಬೇಡಿಕೆ ಸಿಎಂ ಈಡೇರಿಸಲೇಬೇಕು: ಕೋಡಿಹಳ್ಳಿ ಚಂದ್ರಶೇಖರ ಆಗ್ರಹ!
ನಾಲ್ಕು ಜನ ಮುದ್ದಾದ ಹೆಣ್ಣು ಮಕ್ಕಳು ಗಂಡು ಮಗನ ಬರುವ ನಿರೀಕ್ಷೆಯಲ್ಲಿದ್ದ ದಂಪತಿಗೆ ದೇವರು ವರ ಕರುಣಿಸಿದ್ದ
ಇನ್ನೇನು ಕೆಲವೆ ದಿನಗಳಲ್ಲಿ ಬಾಣಂತಿಯಾಗಬೇಕಿದ್ದ ಗರ್ಭಿಣಿ ಮಹಿಳೆ ದುರಂತ ಸಾವು ಕಂಡಿದ್ದು ಯಾಕೆ..?ಮಹಿಳೆ ಸಾವಿನ ಹಿಂದಿದೆ ಭಯಾನಕ ಸತ್ಯ,,, ಇದು ಕೀಚಕ ಭಾವನ ನೀಚ ಕೃತ್ಯ
ಹೌದು,, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಡಿ 20 ರಂದು ನಡೆದ ತುಂಬು ಗರ್ಭಿಣಿ ಸುವರ್ಣ ಮಠಪತಿ ಭೀಕರ ಕೊಲೆಗೆ ಇಡಿ ಗ್ರಾಮವೆ ಬೆಚ್ಚಿ ಬಿದ್ದಿತ್ತು.ಮಠ ಮಠ ಮದ್ಯಾನ ತುಂಬು ಗರ್ಭಿಣಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದ. ಮನೆಗೆ ಬಂದ ಪತಿ ಸ್ಥಳೀಯರ ಸಹಾಯದಿಂದ ಮಹಿಳೆಯನ್ನ ಹಾರೋಗೇರಿ ಖಾಸಗಿ ಆಸ್ಪತ್ರೆಗೆ ರವಾಣಿಸಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತುಂಬು ಗರ್ಭಿಣಿ ಉಸಿರು ಬಿಡುತ್ತಾಳೆ
. ಈ ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ಧಾಖಲಿಸಲಾಗುತ್ತದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ರು ಆರೋಪಿತನ ಜಾಡು ಹಿಡಿದು ಪತ್ತೆಹಚ್ಚಲಾಗಿ, ಕೊಲೆಗಡುಕ ಮೃತ ಸುವರ್ಣ ಳ ಸ್ವಂತ ಅಕ್ಕನ ಗಂಡನೆ ಅಂದ್ರೆ ಭಾವನೆ ಇಂತಹ ಕ್ರೂರ ಕೃತ್ಯ ವೆಸಗಿರೋದು ಬಂಹಿರಂಗವಾಗಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಅಪ್ಪಯ್ಯ ರಾಚಯ ಮಟಪತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸ್ ರ ಲಾಠಿ ರುಚಿಗೆ ಬಾಯಬಿಟ್ಟ ಆರೋಪಿ ಕೆಲವು ಸತ್ಯ ಸಂಗತಿಗಳನ್ನ ಪೋಲಿಸರ ಮುಂದೆ ಬಿಚ್ಚಿಟ್ಟಿದ್ದಾನೆ.ಯಾವದೆ ಕೆಲಸವಿಲ್ಲದೆ, ಕುಡಿತದ ದಾಸನಾದ ಕೊಲೆ ಆರೋಪಿ ಅಪ್ಪಯ್ಯ 7.5 ಲಕ್ಷ ಸಾಲ ಮಾಡಿದ್ದ, ಆಗಾಗ ಮೃತ ಸುವರ್ಣ ಬಳಿಯೂ ಸ್ವಲ್ಪ ಸ್ಪಲ್ಪವಾಗಿ ಸುಮಾರು 50,000 (ಐವತ್ತು ಸಾವಿರ ) ಹಣ ಪಡೆದಿದ್ದ, ಹಣ ನೀಡುವಂತೆ ಕೇಳುತ್ತಿದ್ದ ಸುವರ್ಣಗೆ, ನನಗೆ ಸಾಲ ತುಂಬಾ ಆಗಿದೆ ಈಗ ಸದ್ಯಕ್ಕೆ ಕೊಡಲು ಅಗಲ್ಲ ಎಂದು ಸತಾಯಿಸುತ್ತಿದ್ದನಂತೆ.
ಕೊಲೆ ನಡಿಯೋ ಎರಡು ದಿನಗಳ ಹಿಂದೆ ಸುಮಾರು 20 ನೀಮಿಷ ಗಳ ಕಾಲ ಕೊಲೆ ಆರೋಪಿ ಅಪ್ಪಯ್ಯ, ಜೊತೆ ಸುವರ್ಣ ನನ್ನ ಡೆಲಿವರಿ ಸಮಯ ಹತ್ರ ಬಂದಿದೆ ನನಗೆ ಹಣ ನಿಡು ಎಂದು ಫೋನ್ ನಲ್ಲಿ ಗದರಿದ್ದಾಳೆ.ಸಿಟ್ಟಿಗೆದ್ದ ಅಪ್ಪಯ್ಯ ಆಕೆಯನ್ನ ಮುಗಿಸಿ ಬಿಡುವ ಸಂಚು ಹಾಕಿ ಡಿ 20 ರಂದು ಮದ್ಯಾನ 1 ಗಂಟೆ ಸುಮಾರಿಗೆ ಅವರ ತೋಟದ ಮನೆಗೆ ಬಂದು ಗರ್ಭಿಣಿ ಸುವರ್ಣ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೈಮೇಲ್ಲಿದ್ದ ಓಲೆ, ಹಾಗೂ ಸಣ್ಣ ಪುಟ್ಟ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಕೇವಲ ಹಣಕ್ಕಾಗಿ ತುಂಬು ಗರ್ಭಿಣಿ ಅಂತಾನೂ ಲೆಕ್ಕಿಸದೆ ನೀಚ ಕೃತ್ಯ ವೆಸಗಿದ ಪಾಪಿಗೆ ಪೊಲೀಸ್ ರು ಜೈಲಿಗಟ್ಟಿದ್ದಾರೆ, ಇತ್ತ ತಾಯಿ ಹಾಗೂ ಮಗುವನ್ನ ಕಳೆದುಕೊಂಡ ಕುಟುಂಬ ಅನಾಥವಾಗಿದೆ.