ಚಿಕ್ಕಮಗಳೂರು: ಮರ ಹತ್ತಿ ಇಳಿಯಲಾಗದೆ ರೋಧಿಸುತ್ತಿದ್ದ ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಚಿಕ್ಕಮಗಳೂರಿನ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ. ಇಲಿಯನ್ನು ಓಡಿಸಿಕೊಂಡು ಮರವೇರಿದ್ದ ಬೆಕ್ಕು ಇಳಿಯಲಾರದೆ ರೋಧಿಸುತ್ತಿತ್ತು ಮರದ ರೆಂಬೆ ಕೊಂಬೆಗಳು ಸೂಕ್ಷ್ಮವಾಗಿದ್ದು, ಮುರಿದು ಬೀಳುವ ಸಾಧ್ಯತೆ ಹೆಚ್ಚಿದ್ದರಿಂದ ಸಾರ್ವಜನಿಕರು ಬೆಕ್ಕನ್ನು ರಕ್ಷಿಸಲು ಹಿಂದೇಟು ಹಾಕಿದ್ದರು.
ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿ: ತನ್ನದ್ದಲ್ಲದ ತಪ್ಪಿಗೆ ಪ್ರಾಣ ಬಿಟ್ಟ ಮಹಿಳೆ!
ವಿಚಾರ ತಿಳಿದ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಸುಮಾರು 40 ಅಡಿಗೂ ಎತ್ತರದ ಮರವೇರಿ ಕುಳಿತಿದ್ದ ಬೆಕ್ಕನ್ನು ಅಗ್ನಿಶಾಮಕ ಸಿಬ್ಬಂದಿಗಳು ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.